ಹುಬ್ಬಳ್ಳಿ: ಒಂದೂವರೆ ವರ್ಷದ ಮಗು ಆಕಾಶ್ ಮೃತಪಟ್ಟಿದ್ದಾನೆಂದು ಭಾವಿಸಿ ಸ್ಮಶಾನದಲ್ಲಿ ಅಂತ್ಯಸಂಸ್ಕಾರದ ವೇಳೆ ಅತ್ಯಚ್ಚರಿ ಎಂಬಂತೆ ಜೀವಂತವಾಗಿದ್ದ! ಆದರೆ, ಆ ಕಂದ ಕೊನೆಗೂ ಮೃತಪಟ್ಟಿದ್ದಾನೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಬಸಾಪುರ ಗ್ರಾಮದಲ್ಲಿ ಒಂದೂವರೆ ವರ್ಷದ ಆಕಾಶ್ ಬಸವರಾಜ ಪೂಜಾರ ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿದ್ದ. ಈತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಿಮ್ಸ್ ವೈದ್ಯರು ಆತನಿಗೆ ಸೂಕ್ತ ಚಿಕಿತ್ಸೆ ನೀಡಿದ್ದರು. ಆದ್ರೆ ಬಾಲಕನ ಪೋಷಕರು ಏಕಾಏಕಿಯಾಗಿ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಿದ್ದರು. ಆಗ ಗ್ರಾಮಸ್ಥರು ಮಗುವನ್ನು ಈ ಪರಿಸ್ಥಿತಿಯಲ್ಲಿ ಕರೆದುಕೊಂಡು ಬಂದಿದ್ದು ಸರಿಯಲ್ಲ ಎಂದು ಹೇಳಿದ್ದರು. ಆಗ ಮತ್ತೆ ನವಲಗುಂದ ಆಸ್ಪತ್ರೆಗೆ ದಾಖಲಿಸಿ ಮತ್ತೆ ಕಿಮ್ಸ್ ಅಸ್ಪತ್ರೆಗೆ ಕರೆತರಲಾಗಿತ್ತು. ಆದ್ರೆ, ಬೆಳಗ್ಗೆ ಮತ್ತೆ ಪೋಷಕರು ತಮ್ಮ ಮಗು ಬದುಕಲ್ಲ ಎಂದು ಅರಿತು ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದಾಗ ಮನೆಯಲ್ಲಿಯೇ ಮಗು ಮೃತಪಟ್ಟಿದ್ದು, ಗ್ರಾಮದಲ್ಲಿ ಅಂತ್ಯಸಂಸ್ಥಾರ ನಡೆಸಲಾಯಿತು.
[vc_row][vc_column]
BREAKING NEWS
- ವಂಚನೆ ಪ್ರಕರಣ: ಆರೋಪಿ ಚೈತ್ರಾ ಕುಂದಾಪುರ, ಶ್ರೀಕಾಂತ್ಗೆ ಜಾಮೀನು
- ಪ್ರಾಂಜಲ್ ಕುಟುಂಬಕ್ಕೆ ₹50 ಲಕ್ಷ ಪರಿಹಾರ ಚೆಕ್ ಇಂದು ಹಸ್ತಾಂತರ: ಸಿಎಂ
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ