ಬೆಂಗಳೂರು : ಅಬಕಾರಿ ಇಲಾಖೆಗೆ ಮದ್ಯ ಪ್ರಿಯರು ಭಾರಿ ಶಾಕ್ ನೀಡಿದ್ದಾರೆ. ಮದ್ಯದ ಮೇಲೆ ತೆರಿಗೆ ಏರಿಕೆ ಮಾಡಿದ್ದರಿಂದ ಕೆಳಗಿನ ಬ್ರಾಂಡ್ ಮದ್ಯ ಸೇವಿಸುತ್ತಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ ಹೊಡೆತ ಬಿದ್ದಿದೆ. ಹೌದು, ರಾಜ್ಯದ ಬೊಕ್ಕಸಕ್ಕೆ ಪ್ರಮುಖವಾಗಿ ಮದ್ಯದಿಂದ ಅತಿ ಹೆಚ್ಚು ತೆರಿಗೆ ಹಣ ಸಂಗ್ರಹವಾಗುತ್ತದೆ. ಇದರಿಂದ ರಾಜ್ಯ ಸರ್ಕಾರಗಳು ನೆಮ್ಮದಿಯಂದ ಆಡಳಿತ ನಡೆಸುತ್ತವೆ. ಆದರೆ, ರಾಜ್ಯ ಸರ್ಕಾರದ ಸುಂಕ ಶೇಕಡ 20 ರಷ್ಟರವರೆಗೆ ಏರಿಕೆ ಮಾಡಿದ್ದಕ್ಕೆ ಮದ್ಯ ಪ್ರಿಯರು ತಕ್ಕ ತಿರುಗೇಟು ನೀಡಿದ್ದಾರೆ. ಮದ್ಯದ ದರ ಏರಿಕೆಯಾಗಿರುವುದರಿಂದ ಮದ್ಯ ಮಾರಾಟದಲ್ಲಿ ತೀವ್ರ ಕುಸಿತ ಕಂಡಿದೆ. ಆಗಸ್ಟ್‌ನಲ್ಲಿ ಶೇಕಡಾ 10 ರಿಂದ 15 ರಷ್ಟು ಕಡಿಮೆ ಪ್ರಮಾಣದ ಮದ್ಯ ಮಾರಾಟವಾಗಿದೆ. ಬಜೆಟ್‌ನಲ್ಲಿ ಅಬಕಾರಿ ಸುಂಕ ಹೆಚ್ಚಳ ಮಾಡಿದ್ದು, ಬಿಯರ್‌ಗೆ ಶೇಕಡಾ 10ರಷ್ಟು, ಉಳಿದ ಮದ್ಯಕ್ಕೆ ಶೇಕಡಾ 20ರಷ್ಟು ಸುಂಕ ಹೆಚ್ಚಳ ಮಾಡಲಾಗಿದೆ. ಸ್ಕಾಚ್ ಕುಡಿಯುತ್ತಿದ್ದವರು ಪ್ರೀಮಿಯಂ ಬ್ರಾಂಡ್, ಪ್ರೀಮಿಯಂ ಬ್ರಾಂಡ್ ಸೇವಿಸುತ್ತಿದ್ದವರು ಅದಕ್ಕಿಂತ ಕೆಳಗಿನ ಬ್ರಾಂಡ್ ಖರೀದಿಸುತ್ತಿದ್ದಾರೆ. ಕೆಲವೆಡೆ ನಕಲಿ ಮದ್ಯ ಮಾರಾಟ ಹೆಚ್ಚಾಗಿ ಕಾಣಿಸಿಕೊಳ್ಳತೊಡಗಿದೆ ಎಂದು ಹೇಳಲಾಗಿದೆ. ಜುಲೈನಲ್ಲಿ 3.556.25 ಕೋಟಿ ರೂ. ಮೌಲ್ಯದ ಬಿಯರ್ ಸೇರಿ ಎಲ್ಲ ಬಗೆಯ ಮದ್ಯ ಮಾರಾಟವಾಗಿದೆ. ಆಗಸ್ಟ್ ತಿಂಗಳ 15 ದಿನಗಳಲ್ಲಿ 1,302.90 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ
[vc_row][vc_column]
BREAKING NEWS
- ಮದುವೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಬಿದ್ದ ಮುಸುರೆ ತಟ್ಟೆಗಳು – ವೇಟರ್ನನ್ನು ಕೊಂದು, ಪೊದೆಗೆ ಎಸೆದ ಪಾಪಿಗಳು ಅರೆಸ್ಟ್
- ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸುದ್ದಿಗೋಷ್ಠಿಗೂ ಮುನ್ನ ಪೊಲೀಸ್ ವಶಕ್ಕೆ
- ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದ ಗಾರ್ಬಾ ನೃತ್ಯ
- ‘ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ’- ಬಿ.ವೈ.ವಿಜಯೇಂದ್ರ
- ಲಾರಿ – ಟಾಟಾ ಏಸ್ ನಡುವೆ ಭೀಕರ ಅಪಘಾತ-ನಾಲ್ವರು ಸಾವು
- ಜೈನಮುನಿ ಹತ್ಯೆ ಪ್ರಕರಣ-500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ
- ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ ಅದಕ್ಕೆ ಅವಮಾನ ಮಾಡಬೇಡಿ –ರಿಷಬ್ ಶೆಟ್ಟಿ
- ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?
- ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ..? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ
- ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಿಸೆಂಬರ್ 9ರಂದು ದೇವರ ದರ್ಶನ ಸಮಯದಲ್ಲಿ ಬದಲಾವಣೆ