ವಾಷಿಂಗ್ಟನ್: ಅಮೆರಿಕದ ಅಲಸ್ಕಾದಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂವಿಜ್ಞಾನ ಸರ್ವೇಕ್ಷಣಾ ಇಲಾಖೆ ತಿಳಿಸಿದೆ.
ಭಾನುವಾರ ಮುಂಜಾನೆ ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿದು ಬಂದಿದೆ. ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಭೂಪ್ರದೇಶದಿಂದ 9.3 ಕಿಮೀ (5.78 ಮೈಲುಗಳು) ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಯುಎಸ್ ಜಿಎಸ್ ಹೇಳಿದೆ. ಎರಡು ವಾರಗಳ ಹಿಂದೆ ಅಲಸ್ಕಾದ ಆಂಕಾರೇಜ್‌ನಲ್ಲಿ ಲಘು ಭೂಕಂಪ ಸಂಭವಿಸಿತ್ತು. ಯಾವುದೇ ಹಾನಿ ಸಂಭವಿಸಿರಲಿಲ್ಲ.