ದಾವಣಗೆರೆ; ಅಲೆಮಾರಿ, ಅರೆ ಅಲೆಮಾರಿ ಜನಾಂಗದವರಿಗೆ ಸೌಲಭ್ಯ ಹಾಗೂ ಮೀಸಲಾತಿ ಕಲ್ಪಿಸುವಲ್ಲಿ ಜಿಲ್ಲಾ ಮಟ್ಟದ ಜಿಲ್ಲಾಧಿಕಾರಿಗಳಿಂದ ನಾಮ ನಿರ್ದೇಶಕ ಸದಸ್ಯರನ್ನು ನೇಮಕ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಮಾನದಂಡಗಳು ಹಾಗೂ ಸದಸ್ಯರ ಅರ್ಹತೆ ಮತ್ತು ಜವಾಬ್ದಾರಿಗಳು: ನಾಮ ನಿರ್ದೇಶನ ಬಯಸುವ ವ್ಯಕ್ತಿಯು ದಾವಣಗೆರೆ ಜಿಲ್ಲೆಯವರಾಗಿದ್ದು, 15 ವರ್ಷ ಜಿಲ್ಲೆಯಲ್ಲಿ ವಾಸವಾಗಿರಬೇಕು ಮತ್ತು ಅಲೆಮಾರಿ ಅರೆ ಅಲೆಮಾರಿ ಸಮುದಾಯಕ್ಕೆ ಸೇರಿದವರಾಗಿರಬೇಕು, ಕನಿಷ್ಠ 35 ರಿಂದ 65 ವರ್ಷಗಳಾಗಿರಬೇಕು. ಎಸ್.ಎಸ್.ಎಲ್.ಸಿ ಪೂರೈಸಿರಬೇಕು, ತಮ್ಮ ಜನಾಂಗದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ, ವಾಸಿಸುವ ಸ್ಥಳ, ಕೈಗೊಳ್ಳುತ್ತಿರುವ ಉದ್ಯೋಗದ ಬಗ್ಗೆ ಅಂಕಿ ಅಂಶಗಳ ಮಾಹಿತಿ ತಿಳಿದಿರಬೇಕು, ಅಲೆಮಾರಿ ಅರೆ ಅಲೆಮಾರಿ ಜನಾಂಗಕ್ಕೆ ಸಂಬಂಧಿಸಿದಂತೆ ಜನಾಂಗಕ್ಕೆ ಇರುವ ಮೀಸಲಾತಿ ಸೌಲಭ್ಯ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಮಾಹಿತಿ ಹೊಂದಿರತಕ್ಕದ್ದು, ಯಾವುದೇ ರೀತಿಯ ಕ್ರಿಮಿನಲ್ ಮೊಕದ್ದಮೆಗಳು ಹಾಗೂ ದಂಡ, ಜುಲ್ಮನೆ, ಶಿಕ್ಷೆಗೆ ಒಳಗಾಗಿರಬಾರದು, ಸಮಿತಿಗಳಿಗೆ ನೇಮಿಸುವ ವ್ಯಕ್ತಿಯು ಸಮಾಜದಲ್ಲಿ ಗೌರವಾನ್ವಿತೆ ಹೊಂದಿ, ಮಾನಸಿಕವಾಗಿ ಸ್ವಾಸ್ಥ್ಯವಾಗಿರಬೇಕು.
ಅರ್ಜಿಯನ್ನು ಜಿಲ್ಲಾ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಕೊಠಡಿ ಸಂಖ್ಯೆ 46, 2ನೇ ಮಹಡಿ, ಜಿಲ್ಲಾಡಳಿತ ಭವನ ಕರೂರ ರಸ್ತೆ ದಾವಣಗೆರೆ ಇಲ್ಲಿಂದ ಪಡೆದು ಅಗತ್ಯ ದಾಖಲೆಗಳೊಂದಿಗೆ ಲಿಖಿತ ಮನವಿಯನ್ನು ಆಗಸ್ಟ್ 21 ರ ಒಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08192-262973 ಗೆ ಸಂಪರ್ಕಿಸಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಗಾಯತ್ರಿ ಕೆ.ಹೆಚ್ ತಿಳಿಸಿದ್ದಾರೆ.