ಮಹಾರಾಷ್ಟ್ರ:ನಾಗ್ಪುರದಲ್ಲಿ ಮೂವರು ಮಕ್ಕಳು ನಾಪತ್ತೆ ಪ್ರಕರಣದಲ್ಲಿ ಬೆಳವಣಿಗೆ ನಡೆದಿದೆ.ಮನೆಯಿಂದ 50 ಮೀಟರ್ ದೂರದಲ್ಲಿ ಕಾರಿನಲ್ಲಿ ಸಹೋದರ-ಸಹೋದರಿ ಸೇರಿದಂತೆ ಮೂವರು ಮಕ್ಕಳ ಮೃತದೇಹ ಪತ್ತೆಯಾಗಿದೆ.
ಕಾಣೆಯಾದ ಒಂದು ದಿನದ ನಂತರ ಭಾನುವಾರ ಸಂಜೆ ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖುಷ್ಬೂ ಅವಹೇಳನ ಮಾಡಿದ್ದ ಡಿಎಂಕೆ ವಕ್ತಾರನ ಅವಹೇಳನಕಾರಿ ಹೇಳಿಕೆ, ಪಕ್ಷದಿಂದ ವಜಾ
ಫಾರುಕ್ ನಗರದ ನಿವಾಸಿಗಳಾದ ತೌಫಿಕ್ ಫಿರೋಜ್ ಖಾನ್ (4),ಅಲಿಯಾ ಫಿರೋಜ್ ಖಾನ್ (6) ಮತ್ತು ಅಫ್ರಿನ್ ಇರ್ಷಾದ್ ಖಾನ್ (6) ಶನಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಾಪತ್ತೆಯಾಗಿದ್ದಾರೆ. ಶನಿವಾರ ತಡರಾತ್ರಿಯಾದರೂ ಮಕ್ಕಳು ವಾಪಸ್ ಬಾರದೆ ಇದ್ದಾಗ ಪೊಲೀಸರಿಗೆ ದೂರು ನೀಡಿದ್ದು, ಅಪಹರಣ ಪ್ರಕರಣ ದಾಖಲಾಗಿದೆ. ಭಾನುವಾರ ಸಂಜೆ 7 ಗಂಟೆ ಸುಮಾರಿಗೆ, ಕಾನ್‌ಸ್ಟೆಬಲ್ ತಮ್ಮ ಮನೆಯ ಸಮೀಪ ಎಸ್‌ಯುವಿ ನಿಲ್ಲಿಸಿರುವುದನ್ನು ಕಂಡು ಪರಿಶೀಲಿಸಿದಾಗ ಒಳಗೆ ಮೂವರು ಮಕ್ಕಳ ಶವಗಳು ಪತ್ತೆಯಾಗಿದೆ.
ತೌಫಿಕ್ ಮತ್ತು ಆಲಿಯಾ ಒಡಹುಟ್ಟಿದವರಾಗಿದ್ದು, ಅಫ್ರಿನ್ ಪಕ್ಕದ ಮನೆಯ ಬಾಲಕಿ ಎಂದು ಅಧಿಕಾರಿ ತಿಳಿಸಿದ್ದಾರೆ. ಅವರ ಸಾವಿಗೆ ಕಾರಣವೇನು ಎಂಬುದಕ್ಕೆ ಮರಣೋತ್ತರ ಪರೀಕ್ಷೆ ಬಳಿಕ ಕಾರಣ ಕಂಡುಕೊಳ್ಳಲಾಗುತ್ತದೆ ಎಂದು ನಾಗ್ಪುರ ಪೊಲೀಸ್ ಕಮಿಷನರ್ ಅಮಿತೇಶ್ ಕುಮಾರ್ ಹೇಳಿದ್ದಾರೆ.