Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಆರ್‌ಎಸ್‌ಎಸ್‌ನಿಂದ ನಿಯೋಜಿತವಾದ ವ್ಯಕ್ತಿಗಳು ಸಚಿವಾಲಯಗಳನ್ನ ನಡೆಸುತ್ತಿದ್ದಾರೆ- ರಾಹುಲ್ ಆರೋಪ

0

ಲೇಹ್: ಸರ್ಕಾರದ ಪ್ರತಿ ಸಂಸ್ಥೆಯಲ್ಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ ತನ್ನ ಜನರನ್ನ ಇರಿಸುತ್ತಿದೆ, ಅವರ ಮೂಲಕ ಎಲ್ಲವನ್ನೂ ನಡೆಸುತ್ತಿದೆ. ಆರ್‌ಎಸ್‌ಎಸ್‌ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಿದ ಬಳಿಕ ಮೊದಲ ಬಾರಿಗೆ ಲಡಾಖ್‌ಗೆ ಭೇಟಿ ನೀಡಿರುವ ಅವರು ಲೇಹ್ ನಲ್ಲಿ ಯುವಕರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಆರ್‌ಎಸ್‌ಎಸ್‌ ವಿರುದ್ಧ ಗಂಭೀರ ಆರೋಪ‌ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಯಾವುದೇ ಸಚಿವರನ್ನ ಕೇಳಿದರೂ, ಅವರು ನಿಜವಾಗಿಯೂ ತಮ್ಮ ಸಚಿವಾಲಯಗಳನ್ನ ನಡೆಸುತ್ತಿಲ್ಲ ಎಂದೇ ನಿಮಗೆ ಹೇಳುತ್ತಾರೆ. ಆರ್‌ಎಸ್‌ಎಸ್‌ನಿಂದ ನಿಯೋಜಿತವಾದ ವ್ಯಕ್ತಿಗಳು ವಾಸ್ತವವಾಗಿ ಈ ಸಚಿವಾಲಯಗಳನ್ನ ನಡೆಸುತ್ತಿದ್ದಾರೆ. ಅವರೇ ಏನು ಮಾಡಬೇಕೆಂದು ಸೂಚಿಸುತ್ತಿದ್ದಾರೆ ಎಂದು ಹೇಳಿದರು.

Leave A Reply

Your email address will not be published.