Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಇಂದು ಮತ್ತು ನಾಳೆ ಈ ಭಾಗಗಳಲ್ಲಿ ಆಗಸ್ಟ್ 12 ಮತ್ತು 13 ರಂದು ವಿದ್ಯುತ್ ಇರಲ್ಲ.!

0

 

ಚಿತ್ರದುರ್ಗ : ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗದ ವ್ಯಾಪ್ತಿಯಲ್ಲಿ ಬರುವ ಪಂಡರಹಳ್ಳಿ ಶಾಖಾ ವ್ಯಾಪ್ತಿಯ ಜಾನುಕೊಂಡ ಗ್ರಾಮದ ಹತ್ತಿರ ಎಲ್.ಟಿ ಮಾರ್ಗದ ವಾಹಕ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಇದೇ ಆಗಸ್ಟ್ 12 ಮತ್ತು 13 ರಂದು ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ಅಡಚಣೆಯಾಗುವ ಪ್ರದೇಶಗಳು: 66/11 ಕೆವಿ ಪಂಡರಹಳ್ಳಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಎಫ್-8 ಸೋಲ್ಲಾಪುರ ಎನ್.ಜೆ.ವೈ 11ಕೆವಿ ಮಾರ್ಗದಲ್ಲಿ ವಿದ್ಯುತ್ ಅಡಚಣೆಯಾಗಲಿದೆ.

ಪಂಡರಹಳ್ಳಿ ವ್ಯಾಪ್ತಿಯ ಜಾನುಕೊಂಡ, ಸಿದ್ದಾಪುರ, ಮಾಳಪ್ಪನಹಟ್ಟಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸಬೇಕು ಎಂದು ಬೆಸ್ಕಾಂ ಚಿತ್ರದುರ್ಗ ಗ್ರಾಮೀಣ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.

Leave A Reply

Your email address will not be published.