Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

‘ಇಂದೇ 5 ಗ್ಯಾರಂಟಿ ಜಾರಿ’- ನೂತನ ಸಿಎಂ ಘೋಷಣೆ

0

ಬೆಂಗಳೂರು: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಪದಗ್ರಹಣ ಸಮಾರಂಭದಲ್ಲಿ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ ಎಂದು ಘೋಷಿಸಿದ್ದಾರೆ.

ಕರ್ನಾಟಕದ ಜನರ ಆಶೀರ್ವಾದಿಂದ ನಮ್ಮ ಸರ್ಕಾರ ಬಂದಿದೆ. ರಾಹುಲ್, ಖರ್ಗೆ, ಪ್ರಿಯಾಂಕಾ ಸೇರಿ ಅನೇಕರು ಪ್ರಚಾರ ಮಾಡಿದ್ದರು. ಸಾಹಿತಿಗಳು, ಚಿಂತಕರು, ಕಾಂಗ್ರೆಸ್​ ಪಕ್ಷದ ಪರ ಪ್ರಚಾರ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಹಿಂದೆಯೂ ನುಡಿದಂತೆ ನಡೆದಿದ್ದೇವೆ. ಮುಂದೆಯೂ ಸಹ ಹಾಗೆಯೇ ನಡೆಯುತ್ತೇವೆ ಇಂದೇ 5 ಗ್ಯಾರಂಟಿಗಳನ್ನು ಜಾರಿ ಮಾಡುತ್ತೇವೆ. ಕರ್ನಾಟಕದ ಜನರಿಗೆ ನಾವು ನೀಡಿದ ಭರವಸೆ ಈಡೇರಿಸುತ್ತೇವೆ. ಜನರಿಗೆ ಕೊಟ್ಟಿರುವ ಐದು ಗ್ಯಾರಂಟಿಗಳನ್ನು ಇಂದೇ ಕ್ಯಾಬಿನೆಟ್‌ ಮೀಟಿಂಗ್‌ನಲ್ಲಿ ಒಪ್ಪಿಗೆ ಪಡೆದು, ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

Leave A Reply

Your email address will not be published.