Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಈ ಟೀಪಾಟ್ ಬೆಲೆ ಕೇಳಿದ್ರೆ ದಂಗ್ ಆಗ್ತೀರಾ.! – ಒಂದಲ್ಲ ಎರಡಲ್ಲ 24 ಕೋಟಿ ರೂ.!

0

ಬೆಂಗಳೂರು: 2016 ರಲ್ಲಿ 3,000,000 ಡಾಲರ್‌ (24 ಕೋಟಿ ರೂಪಾಯಿಗೂ ಹೆಚ್ಚು) ಮೌಲ್ಯದ ವಿಶ್ವದ ಅತ್ಯಂತ ಬೆಲೆಬಾಳುವ ಟೀಪಾಟ್‌ನ ಚಿತ್ರಗಳನ್ನು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಹಂಚಿಕೊಂಡಿದೆ. ಈ ಟೀ ಪಾಟ್ ಅನ್ನು 18-ಕ್ಯಾರೆಟ್ ಚಿನ್ನ ತಯಾರಿಸಲಾಗಿದ್ದು, ಹೊರಮೈಯಲ್ಲಿ ಕಟ್ ವಜ್ರವನ್ನು ಅಳವಡಿಸಲಾಗಿದೆ. ಮಧ್ಯದಲ್ಲಿ 6.67-ಕ್ಯಾರೆಟ್ ಮಾಣಿಕ್ಯದಿಂದ ತಯಾರಿಸಲಾಗಿದೆ. ಈ ಫೋಟೋಗೆ ಪ್ರತಿಕ್ರಿಯಿಸಿದ ನೆಟ್ಟಿಗರೊಬ್ಬರು, ‘ಈ ದುಬಾರಿ ಬೆಲೆಯ ಟೀಪಾಟ್‌ನಲ್ಲಿನ ಚಹಾ ಬೆಲೆ ಎಷ್ಟು ಎಂದು ಪ್ರಶ್ನಿಸಿದ್ದಾರೆ. ಮತ್ತೊಬ್ಬರು, “ಚಹಾ ಸ್ವತಃ ತಯಾರಿಸುತ್ತದೆಯೇ?” ಎಂದು ಗೇಲಿ ಮಾಡಿದ್ದಾರೆ. ಮಗ್‌ನ ಹಿಡಿಕೆಯನ್ನು ಆನೆಯೊಂದರ ಪಳಿಯುಳಿಕೆ ದಂತದಿಂದ ಮಾಡಲಾಗಿದೆ ಎಂದು ಗಿನ್ನಿಸ್ ಸಂಸ್ಥೆ ತಿಳಿಸಿದೆ. ಈ ಬೆಲೆಬಾಳುವ ವಸ್ತುವಿನ ಒಡೆತನವನ್ನು ಭಾರತೀಯ ಮೂಲದವರು ಸ್ಥಾಪಿಸಿರುವ ಲಂಡನ್‌ನ ಎನ್ ಸೇಥಿಯಾ ಫೌಂಡೇಶನ್ (N Sethia Foundation) ಹೊಂದಿದೆ.

Leave A Reply

Your email address will not be published.