Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಉಡುಪಿ: ಜೀವಂತ ಹಾವಿಗೆ ಪೂಜೆ – ಭಕ್ತರ ಪುಳಕ

0

ಉಡುಪಿ: ನಾಗರ ಪಂಚಮಿ ಹಬ್ಬದ ಸಂಭ್ರಮ ಇದೇ ವೇಳೆ ಕಾಪುವಿನಲ್ಲಿ ಜೀವಂತ ಹಾವಿಗೆ ಪೂಜೆ, ಜಲಾಭಿಷೇಕ ನಡೆದಿದ್ದು ಭಕ್ತರು ಪುಳಕಗೊಂಡಿದ್ದಾರೆ. ಕಾಪು ತಾಲೂಕಿನ ಮಜೂರಿನಲ್ಲಿರುವ ಗೋವರ್ಧನ ಭಟ್ ಮನೆಯಲ್ಲಿ ಈ ಪೂಜೆ ನಡೆಯಿತು. ಕಳೆದ 20 ವರ್ಷಗಳಿಂದ ಅಪಘಾತದಿಂದ ಗಾಯಗೊಂಡ ನಾಗರ ಹಾವುಗಳ ರಕ್ಷಣೆ ಮಾಡುತ್ತಿರುವ ಭಟ್ , ಅವುಗಳಿಗೆ ಆರೈಕೆ ಮಾಡಿ ಕಾಡಿಗೆ ಬಿಡುತ್ತಿದ್ದಾರೆ. ಇವತ್ತು ತಮ್ಮ ಆರೈಕೆಯಿಂದ ಗಾಯಗೊಂಡು ಗುಣಮುಖವಾದ ನಾಗರಹಾವಿಗೆ ಭಟ್ಟರ ಮನೆಯಲ್ಲಿ ಜಲಾಭಿಷೇಕ ಮಾಡಿ, ದೀಪ ಬೆಳಗಲಾಯಿತು. ಗೋವರ್ಧನ ಭಟ್ ಅವರು ಕಾಪು ಭಾಗದಲ್ಲಿ ನಾಗರ ಹಾವಿನ ವೈದ್ಯರೆಂದೇ ಪ್ರಸಿದ್ದಿ ಪಡೆದಿದ್ದಾರೆ.

Leave A Reply

Your email address will not be published.