Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಉಡುಪಿ: ವಿಡಿಯೋ ಪ್ರಕರಣ – ಗುಜರಾತ್​ನ ಫೋರೆನ್ಸಿಕ್ ಲ್ಯಾಬೋರೇಟರಿಗೆ ಮೊಬೈಲ್ ರವಾನೆ ಸಾಧ್ಯತೆ

0

ಉಡುಪಿ:  ಪ್ಯಾರಾಮೆಡಿಕಲ್ ಕಾಲೇಜು ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಐಡಿ ಅಧಿಕಾರಿಗಳ ತಂಡ ಮೊದಲನೇ ಹಂತದ ತನಿಖೆ ಮುಗಿಸಿ ಬೆಂಗಳೂರಿಗೆ ತೆರಳಿದ್ದು ಎಫ್​ಎಸ್​ಎಲ್ ವರದಿಯ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೆ ಉಡುಪಿಯಲ್ಲೂ ತನಿಖೆ ನಡೆಸಿ ಹೇಳಿಕೆಗಳನ್ನು ಸಿಐಡಿ ಅಧಿಕಾರಿಗಳು ದಾಖಲಿಸಿಕೊಂಡಿದ್ದಾರೆ. ಮೂರು ವಾರಗಳಹಿಂದೆ ವಿದ್ಯಾರ್ಥಿನಿಯರು ಮೊಬೈಲ್ ಫೋನ್ ಗಳನ್ನು ಬೆಂಗಳೂರಿಗೆ ಎಫ್ ಎಸ್ ಎಲ್ ವರದಿಗೆ ಕಳುಹಿಸಲಾಗಿತ್ತು.

ಎಫ್​ಎಸ್ಎಲ್ ಅಧಿಕಾರಿಗಳು ವಿಡಿಯೋ ಫೋಟೋ ರಿಟ್ರೈವ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ವಿಡಿಯೋ ಫೋಟೋ ಹಿಂಪಡೆಯಲಾಗದಿದ್ದರೆ ಗುಜರಾತ್​ಗೆ ಫೋನ್​ಗಳನ್ನು ರವಾನಿಸಲು ಚಿಂತನೆ ನಡೆದಿದೆ. ಗುಜರಾತ್​ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಿಡಿಯೋ ರಿಟ್ರೈವ್ ಮಾಡಿಸಲಾಗುತ್ತೆ. ಒಂದೆರಡು ದಿನದಲ್ಲಿ ಗುಜರಾತ್​ಗೆ ಫೋನ್​ಗಳನ್ನು ರವಾನಿಸುವ ಸಾಧ್ಯತೆ ಇದೆ. ಗುಜರಾತ್​ನ ಫೋರೆನ್ಸಿಕ್ ಸೈನ್ಸ್ ಲ್ಯಾಬೋರೇಟರಿ ಮೂಲಕ ಫೋನ್ ರಿಟ್ರೈವ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

Leave A Reply

Your email address will not be published.