Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

‘ಎಂಪವರಿಂಗ್ ಇಂಡಿಯಾ’ ಪುಸ್ತಕ ಲೋಕಾರ್ಪಣೆಗೊಳಿಸಿದ ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ…!

0

ಬೆಂಗಳೂರು: ಸಮಾಜದ ಮಟ್ಟದಲ್ಲಿ ವಿಜ್ಞಾನದ ಆವಿಷ್ಕಾರಗಳಿಗೆ ಹಲವು ಅಗತ್ಯ ಅವಶ್ಯಕತೆಗಳಿದೆ.

ಜನರು ನೇರವಾಗಿ ತೊಡಗಿಸಿಕೊಂಡಾಗ ಮಾತ್ರ ಆವಿಷ್ಕಾರಗಳು ಜನಸಾಮಾನ್ಯರಿಗೆ ತಲುಪುತ್ತವೆ. ಉನ್ನತ ಶಿಕ್ಷಣದ ತಾಂತ್ರಿಕ ಸಂಸ್ಥೆಗಳು ಈ ತರಹದ ಪರಿಸರವನ್ನು ಸೃಷ್ಟಿಸಬೇಕಿದೆ. ಈ ನಿಟ್ಟಿನಲ್ಲಿ ಅಲ್ಲಿ ಸಮಾಜಶಾಸ್ತ್ರ, ವಿಜ್ಞಾನದ ಇತಿಹಾಸದಂತಹ ಶಿಕ್ಷಣ ವಿಭಾಗಗಳನ್ನು ರಚಿಸುವ ಅಗತ್ಯವಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣಮೂರ್ತಿ ಹೇಳಿದರು.

ಜಯನಗರದ ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ಸಭಾಂಗಣದಲ್ಲಿ ಭಾರತೀಯ ವಿಜ್ಞಾನ ಆಕಾಡೆಮಿ ಮತ್ತು ಐಐಟಿ ಮದ್ರಾಸ್ ಅಲುಮಿನಿ ಅಸೋಸಿಯೇಷನ್‌ ಸಂಸ್ಥೆಗಳು ಜಂಟಿಯಾಗಿ ಪ್ರಕಟಿಸಿರುವ ‘ಎಂಪವರಿಂಗ್ ಇಂಡಿಯಾ’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಮಾತಾನಾಡಿದ ಅವರು, ಸಮುದಾಯಕ್ಕೆ ಸುಲಭವಾಗಿ ತಿಳಿಸುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬರೆಯುವ ಕೋರ್ಸ್​ಅನ್ನು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಇದರಿಂದ ಮಾತ್ರ ವೈಜ್ಞಾನಿಕ ವಿಚಾರಗಳು ಮತ್ತು ವಿಷಯಗಳು ಜನಸಾಮಾನ್ಯರಿಗೆ ತಿಳಿಸಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಭಾರತೀಯ ವಿಜ್ಞಾನ ಅಕಾಡೆಮಿಯು ಜರ್ನಲ್‌ಗಳು, ಪುಸ್ತಕಗಳನ್ನು ಪ್ರಕಟಿಸುವಲ್ಲಿ ಸಕ್ರಿಯವಾಗಿದೆ. ವಿಜ್ಞಾನ, ತಂತ್ರಜ್ಞಾನ ಮತ್ತು ಸಂಬಂಧಿತ ನೀತಿಗಳ ಪೇಪರ್‌ಗಳನ್ನು ಸಹ ಪ್ರಕಟಿಸುತ್ತಿದೆ. ಈ ಪುಸ್ತಕವು ಎರಡರ ನಡುವಿನ ಸಮ್ಮಿಲನವಾಗಿದೆ. ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಲೈವ್ ಡಾಕ್ಯುಮೆಂಟ್ ಆಗಿ ಕೂಡ ಈ ಪುಸ್ತಕವನ್ನು ಪರಿಗಣಿಸಬಹುದಾಗಿದೆ ಎಂದು ಇಂಡಿಯನ್ ಅಕಾಡೆಮಿ ಆಫ್ ಸೈನ್ಸ್​ ಅಧ್ಯಕ್ಷ ಉಮೇಶ್ ವಾಗ್ಮಾರೆ ಹೇಳಿದರು.

ಪುಸ್ತಕದ ಲೇಖಕರಾದ ಪ್ರಖ್ಯಾತ ವಿಜ್ಞಾನಿ ಪ್ರೊ. ಟಿ.ಪ್ರದೀಪ್ ಮತ್ತು ಉದ್ಯಮಿ ಕೃಷ್ಣನ್ ನಾರಾಯಣನ್ ಪುಸ್ತಕದ ಬಗ್ಗೆ ಮಾತನಾಡಿ, ಪುಸ್ತಕ ವಿಜ್ಞಾನ ಮತ್ತು ತಂತ್ರಜ್ಞಾನಗಳ ಬಗೆಗಿನ ಬರವಣಿಗೆಗಳ, ವಿಚಾರಗಳ ಆಗು ಹೋಗುಗಳ ದಾಖಲೆಯಾಗಿದೆ. ವಿಜ್ಞಾನದಿಂದಾಗುವ ಸಾಮಾಜದ ಉನ್ನತಿಗಾಗಿ ಕೆಲ ಶಿಫಾರಸುಗಳನ್ನು ನೀಡಲಾಗಿದೆ. ಅವುಗಳ ಅನುಷ್ಠಾನವು ಇಂದಿನ ಅಗತ್ಯವಾಗಿದೆ. ಉನ್ನತ ಶಿಕ್ಷಣದ ಪಠ್ಯಕ್ರಮದಲ್ಲಿ ಎಲ್ಲ ಸ್ಟ್ರೀಮ್‌ಗಳು ವಿಚಾರ ಮತ್ತು ವಿಷಯಗಳನ್ನು ಸೇರಿಸಿದಾಗ ಒಟ್ಟಾರೆ ಬೆಳವಣಿಗೆ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾರತೀಯ ವಿಜ್ಞಾನ ಆಕಾಡೆಮಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಮಹೇಶ್ ಚಂದ್ರ ಹಾಗೂ ಹಲವರು ಉಪಸ್ಥಿತರಿದ್ದರು. ಅಲ್ಲದೇ, ನಾರಾಯಣಮೂರ್ತಿ ಸೇರಿ ಪ್ರಮುಖರು ಸಭಿಕರೊಂದಿಗೆ ಸಂವಾದ ನಡೆಸಿದರು. ಸಾಮಾಜದ ನೈಜ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದೇ ಮುಖ್ಯ. ಶಿಕ್ಷಣ ಸೇರಿ ಪ್ರತಿಯೊಂದರಲ್ಲಿ ಪಾರದರ್ಶಕ ವ್ಯವಸ್ಥೆಯಾಗಬೇಕು. ಇದು ಭಾರತ ಮಾತ್ರವಲ್ಲದೇ ಇಡೀ ಜಗತ್ತಿಗೆ ಅಗತ್ಯ ಎಂದು ಸಂವಾದದಲ್ಲಿ ನಾರಾಯಣಮೂರ್ತಿ ಹೇಳಿದರು.

Leave A Reply

Your email address will not be published.