ಕಳೆದ ಕೆಲವು ದಿನಗಳ ಹಿಂದಷ್ಟೇ ಸೋಶಿಯಲ್ ಮಿಡಿಯಾದ ತುಂಬೆಲ್ಲ ಕನ್ನಡ ಪರ ಹೋರಾಟಗಾರ ಹಾಗೂ ನ್ಯೂಸ್ ಆಂಕರ್ ಕಿರಿಕ್ ಕೀರ್ತಿ ಅವರ ವೈಯಕ್ತಿಕ ವಿಚಾರಗಳು ಬಹು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅರ್ಪಿತ ಅವರು ಮಾಡಿದ ಕೆಲ ವೈಯಕ್ತಿಕ ತಪ್ಪಿನಿಂದಾಗಿ ಕಿರಿಕ್ ಕೀರ್ತಿ ತಮ್ಮ ಹೆಂಡತಿಯಿಂದ ದೂರಾಗಿದ್ದಾರೆ. ಕಿರಿಕ್ ಕೀರ್ತಿ ಅವರ ವರ್ತನೆಯನ್ನು ಸಹಿಸದ ಅರ್ಪಿತಾ ತಮ್ಮ ಮಗನನ್ನು ಕರೆದುಕೊಂಡು ತವರು ಮನೆಗೆ ವಾಪಸ್ ಆಗಿದ್ದಾರೆ.
ಎಂಬ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲವೂ ಸ್ವಲ್ಪ ತಣ್ಣಗಾದಂತೆ ಇದೀಗ ಮತ್ತೊಂದು ವಿಚಾರ ಸಾಕಷ್ಟು ಮಾಧ್ಯಮ ಹಾಗೂ ಟ್ರೋಲ್ ಪೇಜ್ ಗಳಲ್ಲೆಲ್ಲ ಹರಿದಾಡುತ್ತಿದ್ದು, ಇದರ ಕುರಿತು ಕೆಂಡಮಂಡಲರಾಗಿರುವ ಕಿರಿಕ್ ಕೀರ್ತಿ ಸ್ಪಷ್ಟನೆ ನೀಡುವುದರ ಜೊತೆಗೆ ಇಲ್ಲಸಲ್ಲದ ಊಹ ಪೊಹಗಳನ್ನು ಹಬ್ಬಿಸುತ್ತಿರುವವರಿಗೆ ತಮ್ಮದೇ ದಾಟಿಯಲ್ಲಿ ವಾರ್ನಿಂಗ್ ನೀಡಿದ್ದಾರೆ.
ಹೌದು, ಕಳೆದ ವರ್ಷ ಅಂದರೆ 2022 ಆಗಸ್ಟ್ 11ನೇ ತಾರೀಖಿನಂದು ಕಿರಿಕ್ ಕೀರ್ತಿ ಅವರಿಗೆ ಮಮ್ತಾಜ್ ಎನ್ನುವ ಮುಸ್ಲಿಂ ಮೂಲದ ಹೋರಾಟಗಾರ್ತಿಯನ್ನು ಭೇಟಿ ಮಾಡಿ ಆಕೆಯೊಂದಿಗೆ ರಕ್ಷಾಬಂಧನವನ್ನು ಆಚರಿಸಿ ಪ್ರೀತಿಯಿಂದ ಕೈಗೆ ರಾಕಿ ಕಟ್ಟಿಸಿಕೊಂಡಿದ್ದರು. ಅಲ್ಲದೆ ಆ ಫೋಟೋಗಳನ್ನು ಸ್ವತಹ ಕಿರಿಕ್ ಕೀರ್ತಿ ಹಾಗೂ ಮಮ್ತಾಜ್ ಅವರು ತಮ್ಮ ತಮ್ಮ ಫೇಸ್ಬುಕ್ ಖಾತೆಯಲ್ಲಿ ಶೇರ್ ಕೂಡ ಮಾಡಿಕೊಂಡಿದ್ದರು.
ಸದ್ಯ ಆ ಫೋಟೋವನ್ನು ಈಗ ಬಳಸಿ ಟ್ರೋಲಿಗರು ಕಿರಿಕ್ ಕೀರ್ತಿ 2ನೇ ಮದುವೆಯಾಗಿದ್ದಾರೆ. ಮುಮ್ತಾಜ್ ಎನ್ನುವ ಮುಸ್ಲಿಂ ಮೂಲದ ಹುಡುಗಿಯನ್ನು ಪ್ರೀತಿಸಿ ಅರ್ಪಿತವರು ಹೋದ ನಂತರ ಗುಟ್ಟಾಗಿ ಮದುವೆಯಾಗುತ್ತಿದ್ದಾರೆ ಎಂಬ ಸುಳ್ಳು ಸುದ್ದಿಯನ್ನು ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಮಾಡುತ್ತಿದ್ದರು. ಇದೆಲ್ಲವನ್ನು ಗಮನಿಸಿದಂತಹ ಕಿರಿಕ್ ಕೀರ್ತಿ ಸಾಕ್ಷಿಯಾದಾರಗಳ ಸಮೇತ ಟಿವಿ ವಿಕ್ರಮ ಚಾನೆಲ್ನಲ್ಲಿ ಪ್ರೋಗ್ರಾಮ್ ಒಂದನ್ನು ಮಾಡಿ ಹರಿದಾಡುತ್ತಿದ್ದಂತಹಗಾಸಿಪ್ಗಳಿಗೆ ಬ್ರೇಕ್ ಹಾಕುವುದರ ಜೊತೆಗೆ ಈ ರೀತಿ ಇಲ್ಲಸಲ್ಲದ ಗಾಳಿ ಸುದ್ದಿಯನ್ನು ಹರಿಬಿಡುವವರಿಗೆ ತಮ್ಮದೇ ದಾಟಿಯಲ್ಲಿ ವಾರ್ನಿಂಗ್ ನೀಡಿದ್ದಾರೆ. ಹೌದು ಗೆಳೆಯರೇ ಹೆಣ್ಣು ಮಗಳ ಅದರಲ್ಲೂ ಅವಿವಾಹಿತ ಹುಡುಗಿ ಬಗ್ಗೆ ಯಾವುದಾದರೂ ಸುಳ್ಳು ಸುದ್ದಿಯನ್ನು ಹಾಕುವಾಗ ನಿಮ್ಮ ಮನೆಯಲ್ಲೂ ಮಗಳು, ಅಕ್ಕ ತಂಗಿಯರು, ಹೆತ್ತ ತಾಯಿ ಹಾಗೂ ಮಡದಿ ಇದ್ದಾರೆ ಎಂಬುದನ್ನು ಸ್ವಲ್ಪ ಯೋಚಿಸಿ ಎಂದು ಕೇಳಿಕೊಂಡರು.