Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಏಕಕಾಲಕ್ಕೆ 5 ʻವಂದೇ ಭಾರತ್ ಎಕ್ಸ್‌ಪ್ರೆಸ್ʼ ರೈಲುಗಳಿಗೆ ಪ್ರಧಾನಿ ಚಾಲನೆ

0

ಭೋಪಾಲ್: ಬೆಂಗಳೂರು-ಧಾರವಾಡ , ರಾಣಿ ಕಮಲಾಪತಿ-ಜಬಲ್ಪುರ್ ಸೇರಿದಂತೆ ಒಟ್ಟು ಐದು ವಂದೇ ಭಾರತ್‌ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಇಂದು ವರ್ಚುವಲ್ ಮೂಲಕ ಚಾಲನೆ ನೀಡಿದ್ದಾರೆ.

ಖಜುರಾಹೊ-ಭೋಪಾಲ್-ಇಂದೋರ್ , ಮಡಗಾಂವ್-ಮುಂಬೈ ಮತ್ತು ಹಟಿಯಾ-ಪಾಟ್ನಾ ಉಳಿದ ನಾಲ್ಕು ವಂದೇ ಭಾರತ್‌ ಸಂಚರಿಸುವ ಮಾರ್ಗಗಳು. ಈ ಪೈಕಿ ರಾಣಿ ಕಮಲಾಪತಿ-ಜಬಲ್ಪುರ್ ಹೊರತುಪಡಿಸಿ ಉಳಿದ ರೂಟ್‌ಗಳಿಗೆ ವರ್ಚುವಲ್‌ ಮೂಲಕ ಚಾಲನೆ ನೀಡಿದ್ದಾರೆ.

ರಾಜ್ಯದೊಳಗೆ ಸಂಚರಿಸಲಿರುವ ಮೊದಲ ವಂದೇ ಭಾರತ್ ರೈಲು ಆಗಿದ್ದು, ಇದು ಧಾರವಾಡ-ಬೆಂಗಳೂರು ಮಧ್ಯೆ ವಾರದಲ್ಲಿ 6 ದಿನ ಸಂಚರಿಸಲಿದೆ.

ಈ ವೇಳೆ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​​​​, ಮಧ್ಯಪ್ರದೇಶ ಸಿಎಂ ಶಿವರಾಜ್ ಸಿಂಗ್ ಉಪಸ್ಥಿತರಿದ್ದರು.

Leave A Reply

Your email address will not be published.