Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಐದು ವರ್ಷ ನಿಖಿಲ್​​ ಕುಮಾರಸ್ವಾಮಿ ಚುನಾವಣೆಗೆ ಸ್ಪರ್ಧಿಸುವುದಿಲ್ಲ- ಹೆಚ್‌ಡಿಕೆ

0

ಮಂಡ್ಯ: ಮುಂದಿನ‌ ಐದು ವರ್ಷ ನಿಖಿಲ್​​ ಕುಮಾರಸ್ವಾಮಿಯನ್ನು ಚುನಾವಣೆಗೆ ಕರೆತರುವ ಪ್ರಶ್ನೆ ಇಲ್ಲ. ಕಲಾವಿದನಾಗಿ ಜೀವನ ರೂಪಿಸಿಕೊಳ್ಳಲು ನಿಖಿಲ್​​ಗೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​​ ಡಿ ಕುಮಾರಸ್ವಾಮಿ ನುಡಿದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈಗಾಗಲೇ ನಿಖಿಲ್​ ಎರಡು ಬಾರಿ ಚುನಾವಣೆಯಲ್ಲಿ ಸೋತಿದ್ದಾನೆ. ಕಳೆದ ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿರಲಿಲ್ಲ. ಆದರೆ ಕಾರ್ಯಕರ್ತರು, ಶಾಸಕರ ಒತ್ತಡಕ್ಕೆ ಮಣಿದು ನಿಖಿಲ್​​ ತಲೆ ಕೊಟ್ಟ ಎಂದರು.

ಸೋಲು, ಗೆಲವು ಸಾಮಾನ್ಯ, ಆ ಬಗ್ಗೆ ಚಿಂತಿಸುವುದಿಲ್ಲ. ಜನಾಭಿಪ್ರಾಯಕ್ಕೆ ತಲೆ ಭಾಗಬೇಕು ಎಂದು ಹೇಳಿದರು. ಹೆಚ್​​.ಡಿ.ದೇವೇಗೌಡರು, ನಾನು ಚುನಾವಣೆಯಲ್ಲಿ ಸೋತಿಲ್ವಾ? ನಿಖಿ ಎಂದು ಪ್ರಶ್ನಿಸಿದ ಕುಮಾರಸ್ವಾಮಿ , ರಾಜಕೀಯದ ಸಹವಾಸಕ್ಕೆ ಹೋಗದೆ, ಭಗವಂತ ಕೊಟ್ಟ ಕಲೆಯನ್ನು ಮುಂದುವರೆಸಲಿ. ಈಗಾಗಲೇ ಮೂರು ಚಿತ್ರ ನಿರ್ಮಾಣ ಮಾಡಲು ಹಲವು ಸಂಸ್ಥೆಗಳು ಮುಂದೆ ಬಂದಿವೆ ಎಂದು ತಿಳಿಸಿದರು.

ಈ ಮಧ್ಯೆ ಅವನ ಹಣೆಬರಹದಲ್ಲಿ ಬರೆದಿದ್ದರೇ ಯಾರು ತಪ್ಪಿಸಲು ಸಾಧ್ಯವಿಲ್ಲ. ನಿನ್ನ ಜೀವನ ರೂಪಿಸಿಕೊಳ್ಳಲು ನೀನು ಮೊದಲು ಭದ್ರವಾಗು ಎಂದಿದ್ದೇನೆ.ಲೋಕಸಭೆ ಚುನಾವಣೆ ಸಿದ್ಧತೆ ಮಾಡಿಕೊಳ್ಳಲು ಇನ್ನೂ ಸಮಯವಿದೆ. ಕಾರ್ಯಕರ್ತರ ಜೊತೆ ಚರ್ಚಿಸಿ ನಾವು ತೀರ್ಮಾನ ಮಾಡುವುದಾಗಿ ಹೆಚ್‌ ಡಿಕೆ ತಿಳಿಸಿದರು.

Leave A Reply

Your email address will not be published.