ಮಧುಗಿರಿ: ಇತ್ತೀಚಿನ ದಿನಗಳಲ್ಲಿ ಜನ್ಮ ಕೊಟ್ಟ ತಾಯಿಯಿಂದಲೇ ಮಗುವಿನ ಹತ್ಯೆ ಆಗುತ್ತಿದೆ. ಅದೇ ರೀತಿ ಇಲ್ಲೊಂದು ಮಾನವಿಯತೆ ಇಲ್ಲದ ತಾಯಿ ಒಂದು ವರ್ಷದ ಮಗುವನ್ನು ಬ್ಲೇಡ್ ನಿಂದ ಕೊಯ್ದು ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದಲ್ಲಿ ನಡೆದಿದೆ. ಕ್ರಿತೀಶ್(1) ಕೊಲೆಯಾದ ಮಗು.
ಪಟ್ಟಣದ ಡೂಂ ಲೈಟ್ ವೃತ್ತದ ಸಮೀಪ ಇರುವ ತಿಪ್ಪಾಪುರ ಛತ್ರದ ಹಿಂಭಾಗದ ಮನೆಯಲ್ಲಿ ಆಟವಾಡುತ್ತಿದ್ದ ಮಗು ಕ್ರಿತೀಶ್ ಕೈಯನ್ನು ತಾಯಿ ಶ್ವೇತಾ ಬ್ಲೇಡ್ ನಿಂದ ಏಕಾಏಕಿಯಾಗಿ ಕೊಯ್ದಿದ್ದಾರೆ. ತೀವ್ರ ರಕ್ತ ಸ್ರಾವವಾಗಿ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎನ್ನಲಾಗಿದೆ. ಬಳಿಕ ತಾಯಿ ಶ್ವೇತಾ ಕತ್ತು ಕೊಯ್ದುಕೊಂಡಿದ್ದು, ಅವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಜ್ಯದ ಜನತೆಗೆ ಜುಲೈನಿಂದ ಫ್ರೀ ಕರೆಂಟ್’, ಆ.1 ಕ್ಕೆಗೃಹಜ್ಯೋತಿ’ ಯೋಜನೆಗೆ ಚಾಲನೆ
ಶಿವಾನಂದ ಅವರ ಪತ್ನಿಯಾದ ಶ್ವೇತಾ ಮಾನಸಿಕ ಅಸ್ವಸ್ಥೆಯಾಗಿದ್ದು, ನಿಮಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಡಿವೈಎಸ್ ಪಿ.ಕೆ.ಎಸ್.ವೆಂಕಟೇಶ್ ನಾಯ್ಡು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಪ್ರಕರಣ ಮಧುಗಿರಿ ಠಾಣೆಯಲ್ಲಿ ದಾಖಲಾಗಿದೆ.