ಬೆಂಗಳೂರು: ಒಡಿಸ್ಸಾ ರಾಜ್ಯದ ಭುವನೇಶ್ವರದಲ್ಲಿ ಜೂನ್ 9 ರಿಂದ 12 ತಾರೀಕುವರೆಗೆ ಕಿಟ್ ಯುನಿವರ್ಸಿಟಿ ಯಲ್ಲಿ ನಡೆಯುವ ಜನ ಜಾತಿಯ ಖೇಲ್ ಮಹೋತ್ಸವಕ್ಕೆ ಕರ್ನಾಟಕ ರಾಜ್ಯದ ಪರಿಶಿಷ್ಟ ವರ್ಗದವರ ಕರ್ನಾಟಕ ರಾಜ್ಯ ವಾಲಿಬಾಲ್ ತಂಡಕ್ಕೆ ಪುರುಷರ ಮತ್ತು ಮಹಿಳೆಯರ ಆಯ್ಕೆ ಪ್ರಕ್ರಿಯೆಯು ಇದೇ ಬರುವ ಮೇ 20 ತಾರೀಕಿನಂದು ಬೆಂಗಳೂರಿನ ಕಂಠೀರವ ಸ್ಟೇಡಿಯಂ ನಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಇದರ ಆಯ್ಕೆ ಸಮಿತಿಯ ಸದಸ್ಯರಾಗಿ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯೇಷನ್ ಇದರ ಕಮಿಟಿಯ ಐದು ಸದಸ್ಯರನ್ನು ನೇಮಕ ಮಾಡಿರುತ್ತಾರೆ. ಅಲ್ಲದೆ ರಾಷ್ಟ್ರೀಯ ಆಟಗಾರರಾದಂತಹ ಹಿರಿಯ ಆಟಗಾರರನ್ನು ನೇಮಕ ಮಾಡಿರುತ್ತಾರೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ರಾಜ್ಯ ಯುವ ಕೇಂದ್ರ ಬೆಂಗಳೂರು ಆಯುಕ್ತರ ಕಾರ್ಯಾಲಯದಿಂದ ಬಂದ ಆದೇಶ ಪ್ರಕಾರ ಕರ್ನಾಟಕ ರಾಜ್ಯ ವಾಲಿಬಾಲ್ ಅಸೋಸಿಯನ್ ಇದರ ಅಡಾಕ ಕಮಿಟಿಯ ಚೇರ್ಮನ್ ಮತ್ತು ಕನ್ವೀನರ್ ಆದ ಆಂಟೋನಿ ಜೋಸೆಫ್ ಸಮಿತಿಯನ್ನು ರಚಿಸಿ ಪ್ರತ್ಯೇಕವಾಗಿ ಅಡ ಕಮಿಟಿಯ ಸದಸ್ಯರಾದ ಎಂಎಂ ಗುಡಿಯವರಿಗೆ ಸಂಪೂರ್ಣ ಜವಾಬ್ದಾರಿಯನ್ನು ಕೊಟ್ಟಿರುತ್ತಾರೆ.
ಭಾಗವಹಿಸುವಆಟಗಾರರಿಗೆ ಅರ್ಹತೆಗಳು
*ಪರಿಶಿಷ್ಟ ಜಾತಿ ಪಂಗಡದವರಾಗಿರಬೇಕು
*ಜಾತಿ ಸರ್ಟಿಫಿಕೇಟ್ ಅನ್ನು ಹೊಂದಿರಬೇಕು
*ಆಯ್ಕೆ ಪ್ರಕ್ರಿಯೆ ಬರುವವರಿಗೆ ಎಲ್ಲಾ ವೆಚ್ಚಗಳನ್ನು ಅವರೇ ಬರಿಸತಕ್ಕದ್ದು
ರಾಜ್ಯ ವಾಲಿಬಾಲ್ ಅಸೋಸಿಯೇಷನ್ ನ ಚೇರ್ಮನ್ ಮತ್ತು ಕನ್ವೀನರ್ ರಾದ ಜೋಸೆಫ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ