ಕನಕಪುರ : ಸ್ನೇಹಿತರೆ, ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮತ್ತು ಸಾವಿರ ರೂಪಾಯಿ ನೋಟುಗಳನ್ನು ಬ್ಯಾನ್ ಮಾಡಿದ ಹಾಗೆ ಆರ್‌ಬಿಐ ನಿಯಮದಂತೆ 2000 ನೋಟುಗಳ ಚಲಾವಣೆಯನ್ನು ತಡೆಯ ಹಿಡಿಯಲಾಗುತ್ತದೆ ಎಂಬ ಸುದ್ದಿ ಅಧಿಕೃತವಾಗಿ ಹೊರ ಬಂದಿದೆ. ಇದರ ಬೆನ್ನಲ್ಲೇ ಸದ್ಯ ಕನಕಪುರ ರಸ್ತೆ ಬಳಿ ಸೂಟ್ಕೇಸ್ ಹಾಗೂ ಪೇಪರ್ ಬಾಕ್ಸ್ನಲ್ಲಿ ಕಂತೆ ಕಂತೆ ನೋಟ್ಗಳು ಪತ್ತೆಯಾಗಿದ್ದು ಪೊಲೀಸರಿಗೆ ಅಚ್ಚರಿಯನ್ನುಂಟು ಮಾಡಿದೆ.
ಹೌದು ಗೆಳೆಯರೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಿರುವ ಸೂಚನೆಯ ಪ್ರಕಾರ ಇನ್ನು ಕೆಲವೇ ಕೆಲವು ದಿನಗಳಲ್ಲಿ 2000 ಮುಖಬೆಲೆಯ ನೋಟುಗಳ ಚಲಾವಣೆಯು ಸಂಪೂರ್ಣ ಸ್ಥಗಿತವಾಗಲಿದ್ದು, ಇದನ್ನು ಬದಲಿಸಿಕೊಳ್ಳಲು ಕೊನೆಯ ದಿನಾಂಕವನ್ನು ಆರ್‌ಬಿಐ ತಿಳಿಸಿ ಬಿಟ್ಟಿದೆ. ಹೀಗಾಗಿ ಕೆಲ ದುಷ್ಕರ್ಮಿಗಳು ತಮ್ಮ ಬಳಿ ಇರುವಂತಹ ಕಪ್ಪು ನೋಟುಗಳನ್ನು ಬ್ಯಾಂಕ್ ಗಳಲ್ಲಿ ಬದಲಿಸಿಕೊಳ್ಳಲು ಸಾಧ್ಯವಾಗದೆ.
ಅಡ್ಡ ಮಾರ್ಗವನ್ನು ಹಿಡಿಯಲು ಪ್ರಾರಂಭಿಸಿದ್ದಾರೆ. ಬ್ಯಾಂಕಿನಲ್ಲಿ ಕೋಟಿ ಕೋಟಿ ಹಣವನ್ನು ಡೆಪಾಸಿಟ್ ಮಾಡಿದರೆ ಅದಕ್ಕೆ ಸರಿಯಾದ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಕಪ್ಪು ಹಣ / ಬ್ಲಾಕ್ ಮನಿಗೆ ಯಾವುದೇ ರೀತಿಯ ಸೂಕ್ತ ದಾಖಲೆಗಳಿಲ್ಲದ ಕಾರಣ ಅಡ್ಡ ದಾರಿಯ ಮೂಲಕ ನಕಲಿಯನ್ನು ಅಸಲಿ ಮಾಡ ಹೊರಟಿದ್ದಾರೆ. ಇದರ ಬೆನ್ನತ್ತಿ ಹೊರಟ ಪೊಲೀಸರಿಗೆ ಕನಕಪುರ ರಸ್ತೆಯ ಬಳಿ ಸೂಟ್ ಕೇಸ್ನಲ್ಲಿ ಹಾಗೂ ಪೇಪರ್ ಬಾಕ್ಸ್ ಗಳಲ್ಲೆಲ್ಲ 2000 ನೋಟುಗಳ ರಾಶಿ ದೊರಕಿದೆ.
ಇದನ್ನು ತಳಗಟ್ಟಪುರ ಪೊಲೀಸ್ ಠಾಣೆಯವರು ವಶ ಪಡೆದುಕೊಂಡಿದ್ದು ತನಿಖೆ ನಡೆಸಲು ಪ್ರಾರಂಭಿಸಿದ್ದಾರೆ. ಹೌದು ಗೆಳೆಯರೇ ಜೆರಾಕ್ಸ್ ನೋಟುಗಳ ರೂಪದಲ್ಲಿರುವ ಇವುಗಳನ್ನು ಕನಕಪುರ ರಸ್ತೆಯ ಬಳಿ ತಂದು ಇಟ್ದವರು ಯಾರು? ಎಂಬುದನ್ನು ಪೊಲೀಸರು ಬೇಧಿಸ ಹೊರಟಿದ್ದು ಮುಂದಿನ ದಿನಗಳಲ್ಲಿ ಇದರ ಅಸಲಿ ಮಾಹಿತಿ ತಿಳಿದು ಬರಲಿದ್ಯಾ? ಎಂಬುದನ್ನು ಕಾದು ನೋಡಬೇಕಿದೆ.
ಇಂತಹ ಸಾಕಷ್ಟು ಘಟನೆಗಳು 2016ರ ಸಂದರ್ಭದಲ್ಲಿ 1000 ಹಾಗೂ 500 ರೂಪಾಯಿ ಮುಖಬೆಲೆಯ ನೋಟುಗಳು ಅಮಾನ್ಯೀಕರಣವಾದಾಗ ವೈರಲ್ ಆಗಿತ್ತು, ಅದರಂತೆ ಎರಡನೇ ಹಂತದ ನೋಟ್ ಬ್ಯಾನ್ನಲ್ಲಿಯೂ ಕಂತೆ ಕಂತೆ ಕಪ್ಪು ಹಣ ದೊರಕುತ್ತಿರುವ ಮಾಹಿತಿ ತಿಳಿದು ಬಂದಿದೆ.