ಚಿತ್ರದುರ್ಗ : ಪಿಳ್ಳೆಕೆರನಹಳ್ಳಿ ರಸ್ತೆ, ಕನಕ ನಗರದಲ್ಲಿರುವ ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ 2023-2026 ನೇ ಅವಧಿಯ ಪದಾಧಿಕಾರಿಗಳ ಪ್ರಥಮ ಸಭೆ ನಡೆಯಿತು.
ಅಧ್ಯಕ್ಷ ಆರ್.ರಂಗಪ್ಪರೆಡ್ಡಿ, ಉಪಾಧ್ಯಕ್ಷರುಗಳಾದ ಎಂ.ಶಿವಾನಂದಪ್ಪ, ಬಿ.ಪಿ.ಪ್ರೇಮನಾಥ್, ಪ್ರಧಾನ ಕಾರ್ಯದರ್ಶಿ ಎಂ.ರಂಗಪ್ಪ, ಸಹ ಕಾರ್ಯದರ್ಶಿ ಕೆ.ಎಸ್.ಜಯಣ್ಣ, ಖಜಾಂಚಿ ಎನ್.ಆರ್.ಬೈಯಣ್ಣ, ಸಂಘಟನಾ ಕಾರ್ಯದರ್ಶಿ ಟಿ.ಆರ್.ಮಂಜುನಾಥ್, ಸಾಂಸ್ಕøತಿಕ ಕಾರ್ಯದರ್ಶಿ ಎಫ್.ಆರ್.ಹಾಲಗೇರಿ, ಕ್ರೀಡಾ ಕಾರ್ಯದರ್ಶಿ ಪಿ.ನಾಗರಾಜ್, ಲೆಕ್ಕಪರಿಶೋಧಕ ಡಿ.ಟಿ.ನಾಗರಾಜ್, ಕುಂದುಕೊರತೆ ವಿಭಾಗ ಹಾಗೂ ಸಮನ್ವಯ ಅಧ್ಯಕ್ಷ ನಾಗರಾಜ್ ಸಂಗಂ ಮತ್ತು ನಿರ್ದೇಶಕರುಗಳು ಸಭೆಯಲ್ಲಿ ಭಾಗವಹಿಸಿ ನಿವೃತ್ತ ನೌಕರರ ಸಮಸ್ಯೆಗಳ ಕುರಿತು ಚರ್ಚಿಸಿದರು.