Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಾಂಗ್ರೆಸ್​ನ 6ನೇ ಗ್ಯಾರಂಟಿ ಘೋಷಣೆ ಮಾಡಿದ ಪ್ರಿಯಾಂಕ ಖರ್ಗೆ

0

ಬೆಂಗಳೂರು: ಕಾಂಗ್ರೆಸ್​ನ ಭರ್ಜರಿ​ ಗೆಲುವಿನಲ್ಲಿ ಈ ಗ್ಯಾರಂಟಿಗಳು ಕೂಡ ಪ್ರಮುಖ ಪಾತ್ರವಹಿಸಿವೆ. ಐದು ಗ್ಯಾರಂಟಿಗಳನ್ನು ಯಾವ ರೀತಿ ಈಡೇರಿಸುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. ಇದರ ನಡುವೆಯೇ ಇನ್ನೊಂದು ಗ್ಯಾರಂಟಿಯನ್ನು ಕಾಂಗ್ರೆಸ್​ ಘೋಷಣೆ ಮಾಡಿದೆ. ಆದರೆ, ಈ ಬಾರಿ ಕಾಂಗ್ರೆಸ್​ ಪಕ್ಷದಿಂದ ಗ್ಯಾರಂಟಿ ಘೋಷಣೆಯಾಗಿಲ್ಲ. ಬದಲಾಗಿ ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಿಯಾಂಕ ಖರ್ಗೆ ಅವರಿಂದ 6ನೇ ಗ್ಯಾರಂಟಿ ಘೋಷಣೆಯಾಗಿದೆ. ಇಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಎಂಟು ಸಚಿವ ಪದಗ್ರಹಣ ಸಮಾರಂಭ ಕಂಠೀರವ ಸ್ಟೇಡಿಯಂನಲ್ಲಿ ನಡೆಯಲಿದೆ. ಪ್ರಿಯಾಂಕ ಖರ್ಗೆ ಅವರಿಗೂ ಸಚಿವ ಸ್ಥಾನ ದೊರೆತಿದೆ. ಹೀಗಾಗಿ ಪ್ರಮಾಣವಚನ ಸ್ವೀಕರಿಸಲು ಕಂಠೀರವ ಸ್ಟೇಡಿಯಂಗೆ ಆಗಮಿಸಿದ್ದು, ಅದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿ ಆರನೇ ಗ್ಯಾರಂಟಿ ಘೋಷಣೆ ಮಾಡಿದರು. ಯಾವುದು ಆ ಗ್ಯಾರಂಟಿ ಎಂದರೆ, ಪಿಎಸ್​ಐ ಹಾಗೂ ಬಿಟ್​ಕಾಯಿನ್ ಹಗರಣಗಳಿಗೆ ತಾರ್ಕಿಕ ಅಂತ್ಯವನ್ನು ಕಾಂಗ್ರೆಸ್​ ನೀಡಲಿದೆಯಂತೆ. ಇದು ನನ್ನ ಆರನೇ ಭರವಸೆ ಎಂದು ಪ್ರಿಯಾಂಕ ಖರ್ಗೆ ಹೇಳಿದ್ದಾರೆ. ಬಿಜೆಪಿ ಸರ್ಕಾರದ ಹಗರಣಗಳ ಆರೋಪಿಗಳಿಗೆ ಶಿಕ್ಷೆ ನೀಡಿಸಲಾಗುವುದು. ಎರಡು ಪ್ರಕರಣಗಳನ್ನು ಲಾಜಿಕ್ ಎಂಡ್​ಗೆ ತೆಗೆದುಕೊಂಡು ಹೋಗಲಾಗುವುದು ಎಂದು ಪ್ರಿಯಾಂಕ ಖರ್ಗೆ ಭರವಸೆ ನೀಡಿದ್ದಾರೆ.

Leave A Reply

Your email address will not be published.