ಆನೇಕಲ್ : ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಕರ್ನಾಟಕ ಗೂಂಡಾ ರಾಜ್ಯ ಆಗಿ ಬದಲಾವಣೆ ಆಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಹೌದು ದೇಶದ್ರೋಹಿಗಳು ಪಾಕಿಸ್ತಾನ ಕ್ಕೆ ಜೈ ಎನ್ನುತ್ತಿದ್ದಾರೆ. ಇದರ ಮುಂದುವರಿದ ಭಾಗವಾಗಿ ಹಲವು ಕಡೆ ಗೂಂಡಾಗಿರಿ ನಡೆಯುತ್ತಿದೆ. ಹೊಸಕೋಟೆ ಕ್ಷೇತ್ರ ದ ಡಿ ಶೆಟ್ಟಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೋತ್ಸವ ನೆಪದಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆದಿದೆ. ಪಟಾಕಿ ಸಿಡಿಸಬೇಡಿ ಎಂದಿದ್ದಕ್ಕೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ಬಿಜೆಪಿ ಕಾರ್ಯಕರ್ತನ ಮನೆ ಮೇಲೆ ದಾಳಿಯಾಗಿದೆ. ಹೊಸಕೋಟೆ ಕ್ಷೇತ್ರದ ಡಿ ಶೆಟ್ಟಹಳ್ಳಿ ವಾಸಿ ಕೃಷ್ಣಪ್ಪ ಮತ್ತು ಮಗ ಬಾಬು ಮೇಲೆ ದಾಳಿಯಾಗಿದ್ದು, ಘಟನೆಯಲ್ಲಿ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ. ಅವರ ಮಗ ಬಾಬು ಸ್ಥಿತಿ ಗಂಭೀರವಾಗಿದೆ ಎಂದರು. ಬಿಜೆಪಿ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಖಂಡಿಸುತ್ತೆವೆ. ಪೊಲೀಸರು ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಬೇಕು. ಪೊಲೀಸರು ಖಾಕಿ ಹಾಕಿದ್ದಾರಾ ಅಥವಾ ಕಾಂಗ್ರೆಸ್ ಬಟ್ಟೆ ಹಾಕಿದ್ದಾರಾ. ಕಾಂಗ್ರೆಸ್ಸಿಗರು ಅಧಿಕಾರದ ಹಗ್ಗ ಜಗ್ಗಾಟದಲ್ಲಿ ಜನರ ಹಿತ ಮರೆತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
[vc_row][vc_column]
BREAKING NEWS
- ಪಿಎಸ್ಐ (PSI)ಗಳು ಬರೆದಿರುವ ಪತ್ರ(LETTER)ದಲ್ಲಿ ಏನಿದೆ…? ನಿಯಮಾವಳಿ ಸರಿಪಡಿಸಿ ಎನ್ನುತ್ತಿರುವುದೇಕೆ ಪೊಲೀಸ್ ಸಬ್ ಇನ್ ಸ್ಪೆಕ್ಟರ್ ಗಳು…?
- ಒಡಿಶಾ: ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ
- ವಿಶ್ವ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಭಾರತ ಮೂಲದ ಅಜಯ್ ಬಂಗಾ ನೇಮಕ
- ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಶಿಬಿರ
- ಮುರುಘಾ ಮಠಕ್ಕೆ ಎಂ.ಬಿ.ಪಾಟೀಲ್ ಭೇಟಿ.!
- ಕಂಬಳ ಇತಿಹಾಸದಲ್ಲಿ ಹೊಸ ಅಧ್ಯಾಯ: ಯುವತಿಯರಿಗೆ ತರಬೇತಿ ನೀಡಲು ಅಕಾಡೆಮಿ ಸಿದ್ಧ
- ರಾಷ್ಟ್ರೀಯ ಹ್ಯಾಂಡ್ ಬಾಲ್ ತಂಡಕ್ಕೆ ದುರ್ಗದ ಹುಡುಗರ ಆಯ್ಕೆ.!
- ಜಿಲ್ಲಾ ಉಸ್ತುವಾರಿ ಸಚಿವರ ನೇಮಕ? ಯಾವ್ಯಾವ ಜಿಲ್ಲೆ ಜವಾಬ್ಧಾರಿ ಯಾರ ಹೆಗಲಿಗೆ? ಸಾಂಭವ್ಯರ ಪಟ್ಟಿ ಇಲ್ಲಿದೆ
- ಒಡಿಶಾ: ಭೀಕರ ರೈಲು ಅಪಘಾತಕ್ಕೆ ಕಾರಣವೇನು ಗೊತ್ತಾ? ಇಲ್ಲಿದೆ ಪ್ರಾಥಮಿಕ ವರದಿ ಮಾಹಿತಿ
- ಕಾರ್ಕಳ: ಮೀನು ಸಾಗಿಸುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ