ಬೆಂಗಳೂರು : ಐದು ಗ್ಯಾರೆಂಟಿಗಳ ಭರವಸೆ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಸರ್ಕಾರ ರಚಿಸಿ ಆಡಳಿತ ನಡೆಸುತ್ತಿದೆ. ಇನ್ನು, ಐದು ಗ್ಯಾರೆಂಟಿಗಳ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆದುಕೊಂಡಿದೆ. ಈ ಕುರಿತು ಕಾಂಗ್ರೆಸ್ ರಾಜ್ಯದ ಜನರಿಗೆ ಲಂಚದ ಆಮಿಷವೊಡ್ಡಿ ರಾಜ್ಯದ ಚುಕ್ಕಾಣಿ ಹಿಡಿದಿದೆ ಎಂದು ವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಆರೋಪ ಮಾಡಿದ್ದರು. ‘ರಾಜ್ಯ ಸರ್ಕಾರ ನೀಡಿರುವ ಫ್ರೀ ಗ್ಯಾರಂಟಿ ಯೋಜನೆಯ ಪರಿಣಾಮ ಆರು ತಿಂಗಳಲ್ಲಿ ತಿಳಿಯುತ್ತದೆ. ಮಹಿಳೆಯರು ಫ್ರೀ ಬಸ್‌ನಲ್ಲಿ ಹೊರಟರೇ ಗಂಡಸರು ಮತ್ತೊಂದು ಬಸ್‌ನಲ್ಲಿ ಹೊರಡಬಹುದು ಎನ್ನಿಸುತ್ತದೆ. ಅತ್ತೆ ಮತ್ತು ಸೊಸೆ ನಡುವೆ ಜಗಳ ಕೂಡ ಆಗಬಹುದು. ಆರ್ಥಿಕ ಪರಿಸ್ಥಿತಿ ಬಹಳ ಗಂಭೀರವಾಗಬಹುದು. ಈಗಾಗಲೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ. ವಿದ್ಯುತ್ ಉತ್ಪಾದನೆ ಕಡಿಮೆ ಇದೆ. ಫ್ರೀ ಯೋಜನೆ, ಗ್‌ಟಿ ಕೊಡುವುದು ನನ್ನ ಪ್ರಕಾರ ಲಂಚ’ ಎಂದಿದ್ದರು. ಆದ್ದರಿಂದ ಶಾಸಕ ಸ್ಥಾನದಿಂದ ಸಿಎಂ ಸಿದ್ದರಾಮಯ್ಯರನ್ನು ಅನರ್ಹಗೊಳಿಸಬೇಕೆಂದು ಪ್ರಮೀಳಾ ನೇಸರ್ಗಿ ಅವರು ಆರೋಪಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಗ್ಯಾರೆಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಿದ್ದರು.ಇದೀಗ ಹೈಕೋರ್ಟ್ ನ್ಯಾಯಾಧೀಶ ಸುನಿಲ್ ದತ್, ಪ್ರಕರಣದ ವಿಚಾರಣೆಯನ್ನು ನಾಳೆಗೆ ನಿಗದಿಪಡಿಸಿದ್ದಾರೆ. ಹೀಗಾಗಿ ಗ್ಯಾರೆಂಟಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆ ಜುಲೈ 28 ರಂದು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯಲಿದೆ.
[vc_row][vc_column]
BREAKING NEWS
- ಚಿಕ್ಕ ರೇವಣಸಿದ್ಧ ಶಿವಶರಣರು ಲಿಂಗೈಕ್ಯ.!
- ಸೆ. 29 ಮತ್ತು 30ರಂದು ಮುಂಬೈ ಲೋಕಮಾನ್ಯ ತಿಲಕ್-ಮಂಗಳೂರು ಜಂಕ್ಷನ್ ರೈಲಿಗೆ ಹೆಚ್ಚುವರಿ ಕೋಚ್ – ರೈಲ್ವೆ ಇಲಾಖೆಯಿಂದ ಅಧಿಕೃತ ಪ್ರಕಟಣೆ
- ಪ್ರಧಾನಿ ಮೋದಿ ಅವರ ಆಸ್ತಿ, ಸಾಲ ಎಷ್ಟಿದೆ ಗೊತ್ತೇ ? – ಕಳೆದ ಬಾರಿಗಿಂತ 15.69 ಶೇಕಡಾ ಆಸ್ತಿ ಏರಿಕೆ..!!
- ‘ಸಂವಿಧಾನಬದ್ದ ಹಕ್ಕುಗಳನ್ನು ರಕ್ಷಿಸುವ ಪಣ ತೊಡಿ’-ನೂತನ ಡಿವೈಎಸ್ ಪಿಗಳಿಗೆ ಸಿಎಂ ಕರೆ
- ಕರಿಬೆಕ್ಕು ಅಂತ ಕರಿ ಚಿರತೆ ಸಾಕಿದ ರಷ್ಯಾದ ಯುವತಿ
- ಪಿಎಫ್ ಐ ಕಾರ್ಯಕರ್ತರಿಂದ ಯೋಧನ ಕಿಡ್ನಾಫ್ ಮಾಡಿ ಹಲ್ಲೆ ಪ್ರಕರಣಕ್ಕೆ ಟ್ವೀಟ್ಸ್ : ತನಿಖೆಯಲ್ಲಿ ಸತ್ಯ ಬಯಲು
- ‘ಧಾರ್ಮಿಕ ಗ್ರಂಥಗಳಿಗೆ ಹಕ್ಕುಸ್ವಾಮ್ಯ ಇಲ್ಲ’- ಹೈಕೋರ್ಟ್
- ‘ಈಗ ಕರ್ನಾಟಕದಲ್ಲಿ ಪೊಲೀಸ್ ಸರ್ಕಾರ ಇದೆ’ – ಬೊಮ್ಮಾಯಿ ವಾಗ್ದಾಳಿ
- ಸಂಪೂರ್ಣ ಬದಲಾದ ಜಿಂಕೆ ಮರಿ ರೇಖಾ – ನಟಿ ಈಗಿನ ಸ್ಥಿತಿ ನೋಡಿ ಶಾಕ್ ಆದ ಅಭಿಮಾನಿಗಳು
- ಹೆಣ್ಣು ಮಗುವಿನ ತಾಯಿಯಾದ ನಟಿ ಸ್ವರಾ ಭಾಸ್ಕರ್