ಪಂಜಾಬ್: ಕರ್ನಾಟಕದಲ್ಲಿ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು ನಿಷೇಧಿಸುವ ಬಗ್ಗೆ ಉಲ್ಲೇಖಿಸಿದ ವಿಚಾರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಪಂಜಾಬ್ ನ ಸಂಗ್ರೂರು ಕೋರ್ಟ್ ಸಮನ್ಸ್ ನೀಡಿದೆ.
ಹಿಂದೂ ಸುರಕ್ಷಾ ಪರಿಷತ್ ಬಜರಂಗದಳ ಹಿಂದ್ ಸಂಸ್ಥಾಪಕ ಸಂಗ್ರೂರ್ ಮೂಲದ ಹಿತೇಶ್ ಭಾರದ್ವಾಜ್ ಅವರು ಸ್ಥಳೀಯ ನ್ಯಾಯಾಲಯದಲ್ಲಿ ಖರ್ಗೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
16 ಮತಗಳ ಅಂತರದಿಂದ ಸೋಲು – ಕೋರ್ಟ್ ಮೆಟ್ಟಿಲೇರಲು ಸೌಮ್ಯ ರೆಡ್ಡಿ ನಿರ್ಧಾರ
ಕಾಂಗ್ರೆಸ್ ಬಜರಂಗದಳವನ್ನು ದೇಶವಿರೋಧಿ ಸಂಘಟನೆಗಳೊಂದಿಗೆ ಹೋಲಿಸಿದೆ ಮತ್ತು ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದ ನಂತರ ಬಜರಂಗದಳವನ್ನು ನಿಷೇಧಿಸುವುದಾಗಿ ಭರವಸೆ ನೀಡಿದೆ ಎಂದ ಹಿತೇಶ್ ಆರೋಪಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 10 ರಂದು ಹಾಜರಾಗುವಂತೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಂಗ್ರೂರ್ ಜಿಲ್ಲಾ ನ್ಯಾಯಾಲಯ ಸಮನ್ಸ್ ಜಾರಿ ಮಾಡಿದೆ.