ಮುಂಬೈ: ಮುಂಬೈ ಮೂಲದ ಯುವ ನಟಿ ಹಾಗೂ ಸೀರಿಯಲ್ ಕಲಾವಿದೆ ವೈಭವಿ ಉಪಾಧ್ಯಾಯ ಅವರು ಹಿಮಾಚಲ ಪ್ರದೇಶದಲ್ಲಿ ನಡೆದ ಕಾರು ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.
ಜನಪ್ರಿಯ ಸಾರಾಭಾಯ್ Vs ಸಾರಾಭಾಯ್ ಟಿವಿ ಶೋದಲ್ಲಿನ ಪಾತ್ರಕ್ಕಾಗಿ ಅವರು ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಉತ್ತರ ಭಾರತದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ವೈಭವಿ ಸಾವನ್ನಪ್ಪಿರುವುದಾಗಿ ನಿರ್ಮಾಪಕ ಜೆಡಿ ಮಜೇಥಿಯಾ ಅವರು ಇನ್‌ಸ್ಟಾದಲ್ಲಿ ಈ ಶಾಕಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಶಾಖೆಗೆ ಅವಕಾಶ ನೀಡಬಾರದು: ಸುತ್ತೋಲೆ
32 ವರ್ಷದ ಅವರು ತನ್ನ ಭಾವಿ ಗಂಡನೊಂದಿಗೆ ಹಿಮಾಚಲಕ್ಕೆ ಪ್ರವಾಸಕ್ಕೆ ತೆರಳಿದ್ದರು. ಕಾರು ಕಣಿವೆಗೆ ಬಿದ್ದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.