Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಾರು ಮತ್ತು  ಟಿಟಿ ವಾಹನದ ನಡುವೆ ಅಪಘಾತ-ಮಗು ಸೇರಿ ಇಬ್ಬರು ಮೃತ್ಯು

0

ಚಿಕ್ಕಮಗಳೂರು: ಕಾರು ಮತ್ತು  ಟಿಟಿ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ‌ ಮಗು ಸೇರಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಹೊನ್ನಾವರ ಮೂಲದ ಗಿರಿಧರ್ (46) ಮತ್ತು ಮೂರು ವರ್ಷದ ಮಗು ಮಯಾಂಕ್ ಮೃತರು. ಟಿಟಿಯಲ್ಲಿದ್ದ ಏಳು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ಸಾಗಿಸಲಾಗಿದೆ.

ಗಿರಿಧರ್ ಕುಟುಂಬ ಮದುವೆಗೆ ತೆರಳುವಾಗ
ಬೆಂಗಳೂರು – ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯ ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ಕೇರಳ ಮೂಲದ ಪ್ರವಾಸಿಗರಿದ್ದ ಟಿಟಿ ಮುಖಾಮುಖಿ ಢಿಕ್ಕಿಯಾಗಿದೆ.ಅಪಘಾತದ ರಭಸಕ್ಕೆ ಗಿರಿಧರ್ ಮತ್ತು ಪುತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ

ಟಿಟಿ ಉರುಳಿಬಿದ್ದ ಪರಿಣಾಮ ಅದರಲ್ಲಿದ್ದ ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

Your email address will not be published.