Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕಾವೇರಿ ನೀರು ಹಂಚಿಕೆ ವಿವಾದ| (ಆ.23) ಸರ್ವಪಕ್ಷ ಸಭೆ ಕರೆದ ಸಿಎಂ

0

ತಮಿಳುನಾಡಿಗೆ ಕಾವೇರಿ ನೀರು ಹಂಚಿಕೆ ವಿಚಾರ ಕುರಿತು ಆಗಸ್ಟ್ 23 ರಂದು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಪಕ್ಷಗಳ ಸಭೆ ಕರೆದಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅನೇಕ ವಿಚಾರಗಳ ಬಗ್ಗೆಚರ್ಚೆ ನಡೆಸಲಾಗುವುದು. ಸುಪ್ರೀಂ ಕೊರ್ಟ್​ಗೆ ತಮಿಳುನಾಡು ಅರ್ಜಿಯ ವಿರುದ್ಧ ಅಪೀಲ್ ಹಾಕಲು ಆದೇಶ ಮಾಡಿದ್ದೇವೆ. ಕಾನೂನು ವಿಚಾರಗಳನ್ನು ವಕೀಲರಿಗೆ ಬಿಟ್ಟಿದ್ದೇವೆ. ಕಾವೇರಿ ನದಿಯಲ್ಲಿ ಒಳ ಹರಿವು ಕಡಿಮೆ ಆಗಿದೆ. ಕೃಷ್ಣಾ ತುಂಬಿದ್ದರೂ ಕೂಡ ಒಳಹರಿವಿನಲ್ಲಿ ತುಂಬಾ ಕಡಿಮೆ ನೀರು ಇದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸರ್ವಪಕ್ಷಗಳ ಸಭೆಯಲ್ಲಿಸರ್ಕಾರದ ಪರವಾಗಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಕಾನೂನು ಸಚಿವ ಹೆಚ್.ಕೆ ಪಾಟೀಲ್ ಸೇರಿದಂತೆ ಪ್ರಮುಖರು ಭಾಗವಹಿಸಲಿದ್ದಾರೆ. ವಿಪಕ್ಷಗಳಿಂದ ಯಾರೆಲ್ಲ ಪಾಲ್ಗೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿಲ್ಲ.

 

Leave A Reply

Your email address will not be published.