ಕಾಸರಗೋಡು:ಮರಳು ಮಾಫಿಯಾದೊಂದಿಗೆ ನಂಟು ಆರೋಪದಲ್ಲಿ ಕಾಸರಗೋಡಿನ ಇಬ್ಬರು ಸೇರಿದಂತೆ ಏಳು ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಿರುವ ಬಗ್ಗೆ ವರದಿಯಾಗಿದೆ.
ಉಡುಪಿ: ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆ್ಯಪ್ – ಜಾಗ್ರತೆ ವಹಿಸಲು ಎಸ್‌ಪಿ ಸೂಚನೆ
ಕಾಸರಗೋಡು ಚಂದೇರಾ ಪೊಲೀಸ್ ಠಾಣೆಯ ಟಿ.ಎಂ. ಅಬ್ದುಲ್ ರಶೀದ್ ಮತ್ತು ಚೀಮೇನಿ ಠಾಣೆಯ ಬಿ. ಹರಿಕೃಷ್ಣನ್, ಗ್ರೇಡ್ ಎಸ್‌ಐಗಳಾದ ಕಣ್ಣೂರು ರೂರಲ್‌ನ ಸಿ. ಗೋಕುಲನ್, ಕಲ್ಲಿಕೋಟೆ ರೂರಲ್‌ನ ಪಿ. ಜೋಯಿ ಥೋಮಸ್, ಸಿವಿಲ್ ಪೊಲೀಸ್ ಆಫೀಸರ್‌ಗಳಾದ ಪಿ.ಎ. ನಿಸಾರ್, ಎಂ.ವೈ. ಶಿಬಿನ್ ಮತ್ತು ಪಿ.ಎ. ಶಜೀರ್ ಸೇವೆಯಿಂದ ವಜಾಗೊಂಡವರು. ಈ 7 ಮಂದಿ ತ್ರಿಶ್ಯೂರು ಠಾಣೆಯಲ್ಲಿದ್ದಾಗ ಮರಳು ಮಾಫಿಯಾ ದೊಂದಿಗೆ ನಿಕಟ ನಂಟು ಬೆಳೆಸಿ ಅವರಿಗೆ ಅಕ್ರಮ ಮರಳು ಸಾಗಾಟಕ್ಕೆ ಅಗತ್ಯ ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ.