Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಕುಂದಾಪುರ: 640 ವರ್ಷಗಳ ಹಿಂದಿನ ಮೈಲಾರ ವಿಗ್ರಹ ಪತ್ತೆ..!

0

ಕುಂದಾಪುರ: ಇಲ್ಲಿನ ಬಸ್ರೂರಿನಲ್ಲಿ ಮೈಲಾರ ದೇವರ ಎರಡು ವಿಗ್ರಹಗಳು ಒಂದೆ ಸ್ಥಳದಲ್ಲಿ ಪತ್ತೆಯಾಗಿದೆ. ಈ ಹಿಂದೆ ದೊರೆತ ಕ್ರಿ.ಶ.1383ರ ಕಾಲಮಾನದ್ದೆನ್ನಲಾದ ಶಾಸನದಂತೆ ಈಗ ದೊರೆತ ಮೈಲಾರ ದೇವರ ವಿಗ್ರಹಗಳು ಸುಮಾರು 640 ವರ್ಷಗಳ ಹಿಂದಿನದ್ದು ಎಂದು ಅಂದಾಜಿಸಲಾಗಿದೆ. ಮೈಲಾರ ದೇವರ ಆರಾಧನೆ ಕರಾವಳಿ ಭಾಗದಲ್ಲಿ ವಿರಳವಾಗಿ ಕಂಡು ಬರುತ್ತದೆ. ಮಂಗಳೂರು ಜಪ್ಪು ಬೊಪ್ಪಾಲ್ ನಲ್ಲಿ ದೊರೆತ ವಿಜಯನಗರ ಶಾಸನದ ಉಲ್ಲೇಖದಂತೆ ಬಡಗ ಮೈಲಾರ ದೇವರಿಗೆ ಅಂದರೆ ಬಡಗ ಭಾಗದ ಮೈಲಾರ ದೇವರು ಇರುವ ಕುರುಹನ್ನು ಶಾಸನದಲ್ಲಿ ನೀಡಿದಂತಾಗಿದೆ. ವಿಗ್ರಹ ಪತ್ತೆಯಾದ ಬಸ್ರೂರು ಬಡಗ ಭಾಗದ(ಉತ್ತರ ದಿಕ್ಕಿನ)ಲ್ಲಿರುವುದರಿಂದ ಮತ್ತು ಇತಿಹಾಸ ಪ್ರಸಿದ್ಥ ಸ್ಥಳವೂ ಆಗಿರುವುದರಿಂದ ಬಸ್ರೂರಿನಲ್ಲಿ ಮೈಲಾರ ದೇವರ ಆರಾಧನೆ ನಡೆಯುತ್ತಿತ್ತು ಎನ್ನುವುದಕ್ಕೆ ದಾಖಲೆ ದೊರಕಿದಂತಾಗಿದೆ. ಬಸ್ರೂರಿನಲ್ಲಿ ಪತ್ತೆಯಾದ ಎರಡು ವಿಗ್ರಹಗಳ ಪೈಕಿ ಒಂದರಲ್ಲಿ ಕುದುರೆ ಏರಿದ ವೀರ ಯೋಧನಂತೆ ಕಂಡು ಬಂದಿದ್ದು, ಕೈಯಲ್ಲಿ ಖಡ್ಗ ಎದೆಗೆ ಯೋಧನ ರಕ್ಷಾ ಕವಚ, ಅಲಂಕಾರಗೊಂಡ ಕುದುರೆ ಕಾಲು ಸ್ವಲ್ಪ ಮಡಚಿದ ರೀತಿಯಲ್ಲಿದೆ. ಇನ್ನೊಂದು ಮೈಲಾರ ದೇವರ ಶಿಲಾ ಫಲಕವಾಗಿದ್ದು, ಸಮೀಪದ ದೇವಾನಂದ ಶೆಟ್ಟಿ ಹಳ್ನಾಡು ಇವರ ಕೆರೆಯ ಹೂಳು ಎತ್ತುವಾಗ ಸಿಕ್ಕಿದೆ. ಇದರಲ್ಲಿ ಸ್ತ್ರೀ ಪುರಷ ಕುದುರೆ ಏರಿ ಖಡ್ಗ ಹಿಡಿದ ಶಿಲ್ಪವಿದೆ. ಎರಡೂ ವಿಗ್ರಹಗಳೂ ಕ್ರಿ.ಶ 15 – 16ನೇ ಶತಮಾನಕ್ಕೆ ಹೋಲುವಂತಿದೆ. ಕುಂದಾಪುರ ಚಿಕ್ಕಮ್ಮನ ಸಾಲು ರಸ್ತೆಯಲ್ಲಿ ಮೈಲಾರೇಶ್ವರ ಸನ್ನಿಧಿ ಹಾಗೂ ಪಕ್ಕದಲ್ಲೇ ಲಿಂಗನಮುದ್ರೆ ಕಲ್ಲು ಇರುವುದಕ್ಕೂ ಈ ವಿಗ್ರಹಗಳಿಗೂ ಸಂಬಂಧ ಇರಬಹುದು ಎಂದು ಅಂದಾಜಿಸಲಾಗಿದೆ. ಇತಿಹಾಸ ತಜ್ಞರು, ಪುರಾತತ್ವ ತಜ್ಞರು ವಿಗ್ರಹಗಳನ್ನು ಮೈಲಾರ ವಿಗ್ರಹ ಎಂದು ಖಚಿತಪಡಿಸಿದ್ದಾರೆ ಎನ್ನಲಾಗಿದೆ.

Leave A Reply

Your email address will not be published.