ದೆಹಲಿ; ಕೇಂದ್ರ ಸರ್ಕಾರ, ತನ್ನ ನೌಕರರಿಗೆ ಗುಡ್‌ನ್ಯೂಸ್ ನೀಡಿದೆ. ತುಟ್ಟಿ ಭತ್ಯೆಯನ್ನು 38% ನಿಂದ 42%ಗೆ ಹೆಚ್ಚಿಸಿ ಆದೇಶ ಹೊರಡಿಸಿದೆ.
ಜನವರಿ 1, 2023 ರಿಂದ ಪೂರ್ವಾನ್ವಯವಾಗುವಂತೆ ಭತ್ಯೆ ಹೆಚ್ಚಳವಾಗಲಿದೆ. ಈ ಕ್ರಮದಿಂದ ಸುಮಾರು 47.58 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 69.76 ಲಕ್ಷ ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ.