ಕೇರಳ;ಕುಟ್ಟಿಪ್ಪುರಂನಲ್ಲಿ ಜ್ವರದಿಂದ ಸಾವನ್ನಪ್ಪಿದ 13 ವರ್ಷದ ಬಾಲಕ ಎಚ್1ಎನ್1ಗೆ ಬಲಿಯಾಗಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.
ಎಚ್1ಎನ್1 ಸೋಂಕಿನಿಂದ ಸಾವು ಸಂಭವಿಸಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಆರ್.ರೇಣುಕಾ ಗುರುವಾರ ಖಚಿತಪಡಿಸಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಗೋಕುಲ್ ಎಂಬ ಬಾಲಕ ಕುಟ್ಟಿಪ್ಪುರಂ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಸಾವಿನ ಕಾರಣವನ್ನು ಖಚಿತಪಡಿಸಲು ಆರೋಗ್ಯ ಅಧಿಕಾರಿಗಳು ಗೋಕುಲ್ ಅವರ ರಕ್ತ ಮತ್ತು ಲಾಲಾರಸದ ಮಾದರಿಗಳನ್ನು ಅಲಪ್ಪುಳದ ವೈರಾಲಜಿ ಸಂಸ್ಥೆಗೆ ಕಳುಹಿಸಿದ್ದಾರೆ.
ಇಂತಹ ಜ್ವರಗಳ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕೆಂದು ಜಿಲ್ಲಾ ಆರೋಗ್ಯಾಧಿಕಾರಿ ಕೋರಿದ್ದಾರೆ.
H1NI ವೈರಸ್ ಸೋಂಕಿನ ವಿರುದ್ಧ ಜನರು ಜಾಗರೂಕರಾಗಿರಬೇಕು.ಇದು ಉಸಿರಾಟದ ಮೂಲಕ ಹರಡಬಹುದು.ಸೋಂಕಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡುವಾಗ ಅವರ ಹತ್ತಿರ ನಿಂತಿರುವ ವ್ಯಕ್ತಿಗಳು ವೈರಸ್‌ಗೆ ತುತ್ತಾಗಬಹುದು.
ಆದ್ದರಿಂದ, ಜ್ವರ, ಕೆಮ್ಮು, ಗಂಟಲು ನೋವು, ಶೀತ ಮತ್ತು ದೇಹದ ನೋವಿನಿಂದ ಬಳಲುತ್ತಿರುವವರು ರೋಗ ಹರಡುವುದನ್ನು ತಪ್ಪಿಸಲು ಮನೆಯಲ್ಲೇ ಇರಬೇಕು ಎಂದು ಡಿಎಂಒ ಹೇಳಿದ್ದಾರೆ.
ವೃದ್ಧರು, ಮಕ್ಕಳು ಕಾಯಿಲೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮಾಸ್ಕ್ ಧರಿಸಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.