ಕೊಡಗು;ಮರದಿಂದ ಕೆಳಗೆ ಬಿದ್ದು ಪೊಲೀಸ್ ಸಿಬ್ಬಂದಿ ಮೃತಪಟ್ಟ ಘಟನೆ ಕುಶಾಲನಗರ ತಾಲೂಕಿನ ಕಾನ್ ಬೈಲ್ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ (40) ಮೃತ ದುರ್ದೈವಿ.
ಲೋಕೇಶ್ ಮಾವಿನ ಮರ ಕಸಿಮಾಡಲು ಮರ ಏರಿದ್ದ ಸಮಯದಲ್ಲಿ ಬಿಪಿ ಕಡಿಮೆಯಾಗಿ, ತಲೆ ತಿರುಗಿ ಮರದಿಂದ ಕಾಂಕ್ರೀಟ್ ರೋಡ್ಗೆ ಬಿದ್ದ ಪರಿಣಾಮ ಲೋಕೇಶ್ ಮೃತಪಟ್ಟಿದ್ದಾರೆ.
ಲೋಕೇಶ್ ಅವರು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರಿಗೆ 10 ವಷ೯ಗಳಿಂದ ಗನ್ ಮ್ಯಾನ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಲೋಕೇಶ್ ಮೃತದೇಹವನ್ನು ಮಡಿಕೇರಿ ಜಿಲ್ಲಾ ಸಕಾ೯ರಿ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.