Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ಕೊಪ್ಪಳ: ವಿದ್ಯುತ್ ಬಿಲ್ ವಸೂಲಿಗೆ ಹೋದ ಲೈನ್​ಮ್ಯಾನ್​ ಮೇಲೆ ಚಪ್ಪಲಿಯಿಂದ ಹಲ್ಲೆ

0

ಕೊಪ್ಪಳ: 200 ಯೂನಿಟ್​ ಉಚಿತ ಎಂದು ಗ್ಯಾರಂಟಿ ಎಂದು ಭರವಸೆ ನೀಡಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯುತ್​ ಬಿಲ್​ ನೀಡುವ ವೇಳೆ ಜನಸಾಮಾನ್ಯರು ಅಲ್ಲಲ್ಲಿ ಅಸಮಾಧಾನ ವ್ಯಕ್ತಪಡಿಸುತ್ತಿರುವ ಸುದ್ದಿಗಳು ಸಾಮಾನ್ಯ. ಆದರೆ ಕೆಲ ಜನರು ವಿದ್ಯುತ್​ ಬಿಲ್​ ಕಟ್ಟುವುದಿಲ್ಲ ಎಂದು ಲೈನ್​ಮ್ಯಾನ್​ಗಳ ಜತೆ ಜಗಳಕ್ಕೆ ಇಳಿಯುತ್ತಿರುವುದು ಮುಂದುವರಿದು ಹಲ್ಲೆ ಮಾಡುವ ಸ್ಥಿತಿಗೂ ತಲುಪಿದ್ದಾರೆ.

ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ಭೂಪನೊಬ್ಬ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸಿದ್ದಲ್ಲದೆ, ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ.

‘ಪ್ರೈಮ್ ಮಿನಿಸ್ಟರ್ ಮೋದಿ ಈಸ್ ದಿ ಬಾಸ್’: ಆಸ್ಟ್ರೇಲಿಯಾ ಪ್ರಧಾನಿ

ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬಾತ ವಿದ್ಯುತ್​ ಬಿಲ್ ಬಾಕಿ ಉಳಿಸಿಕೊಂಡಿದ್ದು ಬಿಲ್​ ವಸೂಲಾತಿಗೆಂದು ಲೈನ್​ಮ್ಯಾನ್​ ಮಂಜುನಾಥ್​ ಎಂಬುವರು ತೆರಳಿದ್ದರು. ಈ ವೇಳೆ ಬಿಲ್​ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಕೇಳಿದರೆ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್​ ಕಟ್ಟುವುದಿಲ್ಲ. ವಿದ್ಯುತ್​ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದು ಅವಾಚ್ಯ ಶಬ್ದಗಳಿಂದ ಮಂಜುನಾಥ್​ರನ್ನು ನಿಂದಿಸಿ ಚಪ್ಪಲಿಯಿಂದ ಹಲ್ಲೆ ಮಾಡಿ, ದುರ್ವರ್ತನೆ ತೋರಿದ ಘಟನೆ ನಡೆದಿದೆ.

 

Leave A Reply

Your email address will not be published.