ರಾಜಸ್ಥಾನ: ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಸಾರ್ವಜನಿಕ ಸಮಾರಂಭದಲ್ಲಿ ಕೋಪಗೊಂಡು ಬಾರ್ಮರ್ ಜಿಲ್ಲಾಧಿಕಾರಿಯತ್ತ ಮೈಕ್ ಎಸೆದ ಘಟನೆ ನಡೆದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಶುಕ್ರವಾರ ರಾತ್ರಿ ಬಾರ್ಮರ್ ಸರ್ಕ್ಯೂಟ್ ಹೌಸ್‌ನಲ್ಲಿ ಮುಖ್ಯಮಂತ್ರಿಗಳು ಮಹಿಳೆಯರ ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದಾಗ ಸರ್ಕಾರದ ವಿವಿಧ ಯೋಜನೆಗಳ ಕುರಿತು ಪ್ರತಿಕ್ರಿಯೆ ಸಂಗ್ರಹಿಸುವ ವೇಳೆ ಈ ಘಟನೆ ನಡೆದಿದೆ.
ಮುಖ್ಯಮಂತ್ರಿಗಳು ಜನಸಮೂಹವನ್ನು ಉದ್ದೇಶಿಸಿ ಮಾತನಾಡಲು ಪ್ರಯತ್ನಿಸುತ್ತಿದ್ದಂತೆ, ಮೈಕ್ ಕೈಕೊಟ್ಟಿತ್ತು.
ಇದರಿಂದ ಕೋಪಗೊಂಡ ಸಿಎಂ ಅವರು ಮೈಕ್ ನ್ನು ಬಾರ್ಮರ್ ಜಿಲ್ಲಾಧಿಕಾರಿಯತ್ತ ಎಸೆದಿದ್ದಾರೆ. ನಂತರ ಜಿಲ್ಲಾಧಿಕಾರಿ ಮೈಕ್ ನ್ನು ಕೆಳಗಿನಿಂದ ತೆಗೆದುಕೊಂಡಿದ್ದಾರೆ. ಕೆಲವರು ಕಾರ್ಯಕ್ರಮದಲ್ಲಿ ನಿಂತಿದ್ದನ್ನು ಕಂಡು ಮುಖ್ಯಮಂತ್ರಿಗಳು ಮತ್ತೆ ತಾಳ್ಮೆ ಕಳೆದುಕೊಂಡಿದ್ದಾರೆ. ಎಸ್ಪಿ ಎಲ್ಲಿದ್ದಾರೆ? ಎಸ್ಪಿ ಮತ್ತು ಕಲೆಕ್ಟರ್ ಇಬ್ಬರೂ ಒಂದೇ ರೀತಿ ಕಾಣುತ್ತಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಗೆಹ್ಲೋಟ್ ಎರಡು ದಿನಗಳ ಬಾರ್ಮರ್ ಪ್ರವಾಸದಲ್ಲಿದ್ದರು.ಈ ವೇಳೆ ಈ ಘಟನೆ ನಡೆದಿದೆ.