ಬೆಂಗಳೂರು: “ಶಕ್ತಿ’ ಯೋಜನೆಯಿಂದಾಗುತ್ತಿರುವ ನಷ್ಟ ಭರಿಸಿಕೊಡುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜುಲೈ 27ರಂದು ಕರೆ ನೀಡಿದ್ದ ಖಾಸಗಿ ಬಸ್, ಆಟೋ, ಟ್ಯಾಕ್ಸಿ ಸೇವೆಗಳ ಮುಷ್ಕರ ತಾತ್ಕಾಲಿಕವಾಗಿ ಹಿಂಪಡೆದಿರುವ ಖಾಸಗಿ ವಾಹನ ಚಾಲಕರು ಮತ್ತು ಮಾಲೀಕರು, ಸರ್ಕಾರಕ್ಕೆ ಆಗಸ್ಟ್ 10ರ ಗಡುವು ನೀಡಿದ್ದಾರೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಸಭೆ ಫಲಪ್ರದವಾಗಿದೆ. ರ‍್ಯಾಪಿಡೊ ಬೈಕ್, ಟ್ಯಾಕ್ಸಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು, ರ‍್ಯಾಪಿಡೊ, ಓಲಾ, ಉಬರ್ ಇನ್ನಿತರ ಆನ್‌ಲೈನ್ ಕಂಪನಿಗಳಿಗೆ ಇ–ರಿಕ್ಷಾ ನೋಂದಣಿಯನ್ನು ನಿಷೇಧಿಸಬೇಕು. ಎಲೆಕ್ಟ್ರಿಕಲ್ ಆಟೊ ರಿಕ್ಷಾಗಳಿಗೆ ಆಟೊ ರಹದಾರಿ ನೀಡಬೇಕು. ಚಾಲಕರಿಗೆ ಮಾಸಿಕ 10,000 ಪರಿಹಾರ ನೀಡಬೇಕು. ಸುಲಭ ಕಂತುಗಳಲ್ಲಿ 2 ಲಕ್ಷದವರೆಗೆ ಸಾಲ ಒದಗಿಸಬೇಕು. ಅಸಂಘಟಿತ ವಾಣಿಜ್ಯ ಚಾಲಕರ ಮತ್ತು ಸಾರಿಗೆ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದು ಆಟೊ ಚಾಲಕ ಮಾಲೀಕರ ಸಂಘ ಒತ್ತಾಯಿಸಿದೆ. ರ‍್ಯಾಪಿಡೊದಂಥ ಆ್ಯಪ್ ಕಂಪನಿಗಳಿಗೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಅದನ್ನು ಬೇಗ ಇತ್ಯರ್ಥಗೊಳಿಸಿ ರ‍್ಯಾಪಿಡೊ ನಿಷೇಧಕ್ಕೆ ಕ್ರಮ ಕೈಗೊಳ್ಳಲಾಗುವುದು. ಉಳಿದ ಬೇಡಿಕೆಗಳನ್ನು ಹಂತ ಹಂತವಾಗಿ ನೆರವೇರಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು. ‘ಇಲಾಖಾ ವ್ಯಾಪ್ತಿಯಲ್ಲಿ ಪರಿಹರಿಸಬಹುದಾದ ಬೇಡಿಕೆಗಳನ್ನು ಈಡೇರಿಸಲಾಗುವುದು. ಉಳಿದವುಗಳ ಬಗ್ಗೆ ಮುಖ್ಯಮಂತ್ರಿಯವರು ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಆಗಷ್ಟ 20ರ ಒಳಗೆ ಮುಖ್ಯಮಂತ್ರಿಗಳ ಜೊತೆಗೆ ಸಭೆ ನಡೆಸಲಾಗುವುದು’ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.
[vc_row][vc_column]
BREAKING NEWS
- ಪಾಕ್ ನಲ್ಲಿ ಪ್ರಬಲ ಭೂಕಂಪ ಸಾಧ್ಯತೆ : ಭವಿಷ್ಯ ನುಡಿದ ವಿಜ್ಞಾನಿ
- ‘ಜಾತಿಗಣತಿ ವರದಿ ಸಲ್ಲಿಸಲು ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆ’- ಸಿಎಂ
- ಶಿವಮೊಗ್ಗದ: ಸೆಕ್ಷನ್ 144 ನಿಷೇಧಾಜ್ಞೆ ಕೊಂಚ ಸಡಿಲಿಸಿದ ಪೊಲೀಸ್ – ಅಗತ್ಯ ವಸ್ತುಗಳ ಖರೀದಿಗೆ ಅವಕಾಶ
- ಹೋಮ್ ವರ್ಕ್ ಮಾಡದಕ್ಕೆ ತಲೆಗೆ ಹೊಡೆದ ಶಿಕ್ಷಕಿ- ಯುಕೆಜಿ ವಿದ್ಯಾರ್ಥಿ ಸಾವು
- ಬೆಂಗಳೂರು: ಬೆಳ್ಳಂಬೆಳಗ್ಗೆ 10ಕ್ಕೂ ಹೆಚ್ಚು ಉದ್ಯಮಿಗಳಿಗೆ ಶಾಕ್ ಕೊಟ್ಟ ಐಟಿ ಅಧಿಕಾರಿಗಳು
- ವೀರಶೈವ ಲಿಂಗಾಯತರು ಸ್ವಯಂ ಉದ್ಯೋಗ, ಶೈಕ್ಷಣಿಕ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ.!
- ಕರ್ನಾಟಕ ಡಿ.ಎಸ್.ಟಿ. ಪಿ.ಹೆಚ್.ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
- ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಕಾರ್ಯಕ್ರಮ.!
- ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ- ಡಿ. ಸುಧಾಕರ್
- ಮಾರಕ ಕಾಯಿಲೆ ಡೆಂಗ್ಯೂ ಬಗ್ಗೆ ಈ ಲಕ್ಷಣಗಳು ಕಂಡುಬಂದರೆ.?