ಗುಜರಾತ್ :ಗುಜರಾತ್ ನ ಬೊಟಾಡ್ ಜಿಲ್ಲೆಯ ಕೃಷ್ಣ ಸಾಗರ ಕೆರೆಯಲ್ಲಿ ಮುಳುಗಿ ಐವರು ಅಪ್ರಾಪ್ತ ಬಾಲಕರು ನೀರುಪಾಲಾಗಿರುವ ಘಟನೆ ವರದಿಯಾಗಿದೆ.
ಕೃಷ್ಣ ಸಾಗರ ಕೆರೆಯಲ್ಲಿ ಈಜುತ್ತಿರುವ ವೇಳೆ ಇಬ್ಬರು ಅಪ್ರಾಪ್ತ ಬಾಲಕರು ಕೆರೆಯಲ್ಲಿ ಮುಳುಗುವುದನ್ನು ಅಲ್ಲೇ ಇದ್ದ ಮೂವರು ಬಾಲಕರು ನೋಡಿ ಅವರನ್ನು ರಕ್ಷಣೆ ಮಾಡಲು ಹೋಗಿ, ರಕ್ಷಣೆ ಮಾಡಲು ತೆರಳಿದ್ದ ಮೂವರು ಕೂಡ, ಇಬ್ಬರು ಬಾಲಕರೊಂದಿಗೆ ನೀರುಪಾಲಾಗಿದ್ದಾರೆ ಎಂದು ವರದಿಯಾಗಿದೆ.
Cyclone Mocha: ರಾಜ್ಯದ ಈ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ ಮುಂದುವರೆಯವ ಮುನ್ಸೂಚನೆ
ಈ ಬಗ್ಗೆ ಪೊಲೀಸರಿಗೆ ವಿಷಯ ತಿಳಿದಿದ್ದು,ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದರೂ ಉಳಿಸಿಕೊಳ್ಳುವ ಯಾವ ಪ್ರಯೋಜನವೂ ಆಗಿಲ್ಲ. ಹೀಗಾಗಿ ಮೃತರ ಬಾಲಕರ ಗುರುತು ಪರಿಚಯ ಇನ್ನಷ್ಟೇ ಆಗಬೇಕಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೊಟಾಡ್ ಎಸ್ಪಿ ಕಿಶೋರ್ ಬಲೋಲಿಯಾ ತಿಳಿಸಿದ್ದಾರೆ.