Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಚಂದ್ರನಿಗೆ ಹತ್ತಿರವಾಗುತ್ತಿದೆ ಇಸ್ರೊ ಗಗನನೌಕೆ ಚಂದ್ರಯಾನ-3 : ವಿಡಿಯೊ ಬಿಡುಗಡೆ

0

ಬೆಂಗಳೂರು: ‘ಚಂದ್ರಯಾನ–3’ ಗಗನನೌಕೆಯು ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಸೇರಿತು. ಈ ಕುರಿತು ಗಗನನೌಕೆ ಸೆರೆಹಿಡಿದಿರುವ ಚಂದ್ರನ ಹೊರ ಮೇಲ್ಮೈ ವಿಡಿಯೋವನ್ನು ಚಂದ್ರಯಾನ–3 ಟ್ವಿಟರ್ ಹ್ಯಾಂಡಲ್ ಹಂಚಿಕೊಂಡಿದೆ. ಚಂದ್ರಯಾನ-3 ಬಾಹ್ಯಾಕಾಶ ನೌಕೆ ಕಳುಹಿಸಿದ ಚಂದ್ರನ ಮೊಟ್ಟಮೊದಲ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾನುವಾರ ಬಿಡುಗಡೆ ಮಾಡಿದೆ. ಶನಿವಾರ ಚಂದ್ರನ ಕಕ್ಷೆಗೆ ಲಗ್ಗೆ ಇಟ್ಟ ಬಳಿಕ ಚಂದ್ರಯಾನ-3 ಚಂದ್ರನ ಕುಳಿಗಳು ಇರುವ ಮೇಲ್ಮೈ ಚಿತ್ರವನ್ನು ಸೆರೆ ಹಿಡಿದಿತ್ತು. “ಚಂದ್ರನ ಕಕ್ಷಗೆ ಲಗ್ಗೆ ಇಡುವ ಸಂದರ್ಭದಲ್ಲಿ 2023ರ ಆಗಸ್ಟ್ 5ರಂದು ಚಂದ್ರಯಾನ-3 ಬಾಹ್ಯಾಕಾಶ ನೌಕೆ ಕಂಡಂತೆ ಚಂದ್ರನ ನೋಟ” ಎಂದು ಮಿಷನ್‌ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಿಂದ ಟ್ವೀಟ್ ಮಾಡಲಾಗಿದೆ. ಚಂದ್ರನ ಮೇಲೆ ಈ ನೌಕೆ ಇಳಿಯಲು ಇನ್ನೇನು 4,000 ಕಿಮೀ ಇದೆ ಎಂದು ತಿಳಿದು ಬಂದಿದೆ. ಮುಂದಿನ 18 ದಿನಗಳ ಅವಧಿಯಲ್ಲಿ ‘ಚಂದ್ರಯಾನ–3’ ನೌಕೆಯ ವೇಗವನ್ನು ನಿಧಾನವಾಗಿ ಕಡಿಮೆ ಮಾಡಿ, ಅದನ್ನು ಚಂದ್ರನಿಂದ 100 ಕಿ.ಮೀ. ಅಂತರದ ಕೆಳ ಕಕ್ಷೆಗೆ ತರಲಾಗುತ್ತದೆ. ನಂತರ, ಆಗಸ್ಟ್‌ 23ರ ಸಂಜೆ 5.47ಕ್ಕೆ ಚಂದಿರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಸುವ ಪ್ರಯತ್ನ ನಡೆಯುತ್ತಿದೆ. ‘ಚಂದ್ರಯಾನ–3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ಕಾರ್ಯವನ್ನು ಬೆಂಗಳೂರಿನಲ್ಲಿರುವ ಇಸ್ರೊ ಟೆಲೆಮೆಟ್ರಿ ಟ್ರ್ಯಾಕಿಂಗ್ ಅಂಡ್‌ ಕಮಾಂಡ್ ನೆಟ್‌ವರ್ಕ್‌ (ಐಎಸ್‌ಟಿಆರ್‌ಎಸಿ) ಕೇಂದ್ರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ’ ಎಂದು ಇಸ್ರೊ ತಿಳಿಸಿದೆ. ರೋವರ್‌ (ಪ್ರಜ್ಞಾನ್‌) ಹೊತ್ತ ಲ್ಯಾಂಡರ್‌ (ವಿಕ್ರಮ್) ಚಂದ್ರಯಾನ–3 ನೌಕೆಯಿಂದ ಬೇರ್ಪಟ್ಟು, ಚಂದ್ರನತ್ತ ಪಯಣ ಬೆಳೆಸಲಿದೆ.‌

Leave A Reply

Your email address will not be published.