ಆಂಧ್ರಪ್ರದೇಶ: ಯಶಸ್ವಿಯಾಗಿ ಉಡಾವನೆಗೊಂಡ ಚಂದ್ರಯಾನ 3 ನೌಕೆ ನಿಗದಿತ ಕಕ್ಷೆಗೆ ಸೇರಿದ್ದು , ಇಸ್ರೋದಲ್ಲಿ ಸಂಭ್ರಮದ ವಾತಾವರಣ ಕಂಡುಬಂದಿತು.
ಶ್ರೀ ಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಹೋರಟ ರಾಕೆಟ್ ನಿಂದ ಬೇರ್ಪಟ್ಟ ನೌಕೆ ನಿಗದಿತ ಕಕ್ಷೆಯನ್ನು ಸೇರಿದೆ. ಈ ಮೂಲಕ ಭಾರತ ಚಂದ್ರಯಾನ 3 ರಲ್ಲಿ ಮೊದಲ ಹಂತದ ಯಶಸ್ಸು ಪಡೆದಿದೆ. ಆಗಸ್ಟ್ 23 ಅಥವಾ 24 ರಂದು ನೌಕೆಯು ಚಂದ್ರನ ಅಂಗಳದಲ್ಲಿ ಇಳಿಯಲಿದೆ.