ಚಿಕ್ಕಮಗಳೂರು: ಬೈಕ್ ಅಪಘಾತದದಲ್ಲಿ ಎನ್.ಎಸ್.ಜಿ. ಕಮಾಂಡೋ ಒಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ನಡೆದಿದೆ.
ತರೀಕೆರೆ ತಾಲೂಕಿನ ತಣಿಗೇಬೈಲು ನಿವಾಸಿ ದೀಪಕ್ (31) ಮೃತ ಯೋಧ.
ಇತ್ತೀಚೆಗೆ ಎನ್.ಎಸ್.ಜಿ. ಬ್ಲ್ಯಾಕ್ ಕ್ಯಾಟ್ ಕಮಾಂಡೋವಾಗಿ ದೀಪಕ್ ಅವರು ನೇಮಕವಾಗಿದ್ದರು. ಒಂದು ತಿಂಗಳ ರಜೆ ಮೇಲೆ ಊರಿಗೆ ಬಂದಿದ್ದು ಹೊಸ ಬೈಕಿನಲ್ಲಿ ಬೆಂಗಳೂರಿಗೆ ತೆರಳುವಾಗ ಬೆಂಗಳೂರಿನಲ್ಲೇ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
‘ಡಿಕೆಶಿ, ಸಿದ್ದರಾಮಯ್ಯ ಸರ್ಕಾರದಲ್ಲಿ ದ್ವೇಷ ಸಾಧಿಸೋ ವಾತಾವರಣ ಕಂಡು ಬರ್ತಿದೆ’ – ಕೋಟ ಶ್ರೀನಿವಾಸ ಪೂಜಾರಿ
ಇನ್ನು 2020ರಲ್ಲಿ ದೀಪಕ್ ಮದುವೆಯಾಗಿದ್ದು, ಮನೆಯಲ್ಲಿ ಸಮಾರಂಭಕ್ಕೆಂದು ರಜೆಯಲ್ಲಿ ಬಂದಿದ್ದರು, ಹೊಸ ಬೈಕ್ ಖರೀದಿಸಿ ಕರ್ತವ್ಯಕ್ಕೆ ವಾಪಾಸಾಗುತ್ತಿದ್ದರು ಎಂದು ತಿಳಿದು ಬಂದಿದೆ.