ಬೆಂಗಳೂರು : ಪ್ರಕರಣವೊಂದರ ತನಿಖೆಯಲ್ಲಿ ಎನ್ ಐಎ ಅಧಿಕಾರಿಗಳ ಬೆಂಗಳೂರಿನಲ್ಲಿ ನೆಲಸಿದ್ದ ಅಕ್ರಮ ಬಾಂಗ್ಲ ಪ್ರಜೆಗಳು ಪತ್ತೆಯಾಗಿದ್ದಾರೆ. ಬಾಂಗ್ಲಾ ಮೂಲದ ಆರೋಪಿ ಸೇರಿದಂತೆ ಬರೋಬ್ಬರಿ 42 ಜನ ಬಾಂಗ್ಲಾ ಮೂಲದ ವ್ಯಕ್ತಿಗಳಿಗೆ ಅಕ್ರಮವಾಗಿ ಭಾರತಕ್ಕೆ ಬಂದು ನೆಲೆಸಲು ನೆರವಾಗಿರುವುದು ತಿಳಿದು ಬಂದಿದೆ. ಸದ್ಯ ಬೆಳ್ಳಂದೂರು ಪೊಲೀಸರ ವಶದಲ್ಲಿರುವ ಅಬ್ಧುಲ್ ಖಾದಿರ್ ತಾಲೂಕ್ದಾರ್ ಎಂಬಾತನ ನೆರವಿನಿಂದ ಮೊಹಮ್ಮದ್ ಜಾಹೀದ್ ಹಾಗೂ ಖಲೀಲ್ ಚಪ್ರಾಸಿ ಮಾತ್ರವಲ್ಲದೇ ಇನ್ನೂ ಕನಿಷ್ಠ 40 ಜನ ಭಾರತಕ್ಕೆ ಬಂದು ಬೆಂಗಳೂರು ಸೇರಿದಂತೆ ದೇಶದ ವಿವಿಧ ನಗರಗಳಲ್ಲಿ ಸೆಕ್ಯೂರಿಟಿ, ಹೌಸ್ ಕೀಪಿಂಗ್, ಕೂಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡಿರುವ ವಿಚಾರ ಎನ್ಐಎ ಅಧಿಕಾರಿಗಳು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಭಾರತೀಯ ಸೇನೆಯ ಮಾಹಿತಿಗಳನ್ನ ಪಡೆಯಲು ಪಾಕಿಸ್ತಾನದ ಗುಪ್ತಚರ ಇಲಾಖೆ ಸಂಚು ರೂಪಿಸಿದ್ದರ ಕುರಿತು 2021ರಲ್ಲಿ ಎನ್ಐಎ ಲಕ್ನೋ ಘಟಕ ಪ್ರಕರಣ ದಾಖಲಿಸಿಕೊಂಡಿತ್ತು. ಅದೇ ಪ್ರಕರಣದ ತನಿಖೆಯ ಭಾಗವಾಗಿ ಬೆಂಗಳೂರಿಗೆ ಭೇಟಿ ನೀಡಿದ್ದ ಎನ್ಐಎ ಅಧಿಕಾರಿಗಳ ತಂಡ ಆಗಸ್ಟ್ 7ರಂದು ಖಲೀಲ್ ಚಪ್ರಾಸಿಯನ್ನ ವಶಕ್ಕೆ ಪಡೆದಿತ್ತು.ವಿಚಾರಣೆ ವೇಳೆ ಆರೋಪಿ ಖಲೀಲ್ ಚಪ್ರಾಸಿಯು ಬಾಂಗ್ಲಾ ಪ್ರಜೆಯಾಗಿದ್ದು, 2011ರಲ್ಲಿ ತನ್ನ ಮಾವನಾದ ಅಬ್ದುಲ್ ಖಾದಿರ್ ಸಹಾಯದಿಂದ ಭಾರತಕ್ಕೆ ಬಂದಿರುವುದನ್ನ ಬಾಯ್ಬಿಟ್ಟಿದ್ದ. ಅಲ್ಲದೇ ಬೆಳ್ಳಂದೂರಿನ ಬಳಿ ಅಬ್ದುಲ್ ಖಾದೀರ್ ತಾಲೂಕ್ದಾರ್ ಹಾಗೂ ಮೊಹಮ್ಮದ್ ಜಾಹೀದ್ ನೆಲೆಸಿರುವುದರ ಮಾಹಿತಿ ಹೊರಹಾಕಿದ್ದ. ಅಲ್ಲದೇ ಬಾಂಗ್ಲಾದಿಂದ ಬರುವ ಅಕ್ರಮ ವಲಸಿಗರಿಗೆ ಭಾರತದಲ್ಲಿ ಉದ್ಯೋಗ ವಸತಿ ವ್ಯವಸ್ಥೆಯನ್ನ ಅಬ್ದುಲ್ ಖಾದಿರ್ ನೋಡಿಕೊಳ್ಳುತ್ತಿದ್ದ ಎಂಬುದು ಸಹ ಬಯಲಾಗಿದೆ. ಮತ್ತೋರ್ವ ಆರೋಪಿ ಮೊಹಮ್ಮದ್ ಜಾಹೀದ್ ವಿಚಾರಣೆ ವೇಳೆ, ದುಲಾಲ್ ಎಂಬಾತನಿಗೆ ಇಪ್ಪತ್ತು ಸಾವಿರ ರೂ ನೀಡಿ ಆತನ ನೆರವಿನಿಂದ ಭಾರತಕ್ಕೆ ಬಂದಿರುವುದಾಗಿ ಹಾಗೂ ಅಬ್ದುಲ್ ಖಾದಿರ್ ನ ಸಹಾಯದಿಂದ ನೆಲೆಸಿರುವುದಾಗಿ ತಿಳಿದು ಬಂದಿದೆ.ಎನ್ಐಎ ಅಧಿಕಾರಿಗಳ ವಿಚಾರಣೆ ವೇಳೆ ಆರೋಪಿ ಅಬ್ದುಲ್ ಖಾದೀರ್ ಕನಿಷ್ಠ 40 ಜನ ಅಕ್ರಮ ಬಾಂಗ್ಲಾ ವಲಸಿಗರ ಹೆಸರು ಬಾಯ್ಬಿಟ್ಟಿದ್ದು, ಎಲ್ಲರ ವಿರುದ್ಧ ಬೆಳ್ಳಂದೂರು ಠಾಣೆಯಲ್ಲಿ ಅಕ್ರಮ ವಿದೇಶಿಗರ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
[vc_row][vc_column]
BREAKING NEWS
- ತೆಲಂಗಾಣ ಸಿಎಂ ಆಯ್ಕೆ ತೀರ್ಮಾನ ಎಐಸಿಸಿ ಅಧ್ಯಕ್ಷರ ಹೆಗಲಿಗೆ: ಡಿಕೆಶಿ
- ಮಿಚಾಂಗ್ ಅಬ್ಬರಕ್ಕೆ ಮುಳುಗಿದ ಚೆನ್ನೈ
- ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್ – ಬೆಂಗಳೂರು ಸೇರಿ ರಾಜ್ಯದ 63 ಕಡೆ ದಾಳಿ
- 200 ಟನ್ ಮೆಕ್ಕೆಜೋಳ ಕುಸಿತ ಪ್ರಕರಣ: ಮೂವರು ಕಾರ್ಮಿಕರ ಸಾವು
- ಬ್ರೇಕಿಂಗ್ ಇಂದು ಬೆಳ್ಳಂಬೆಳಗ್ಗೆ 63 ಕಡೆ ಲೋಕಾಯುಕ್ತ ದಾಳಿ.!
- ತಡರಾತ್ರಿ ಫುಡ್ಸ್ ಗೋದಾಮಿನ ಸಂಸ್ಕರಣಾ ಘಟಕದಲ್ಲಿ ಮೆಕ್ಕೆಜೋಳ ಕುಸಿತ ಮೂವರು ಸಾವು.!
- ಮಿಚಾಂಗ್ ಚಂಡಮಾರುತ ಎಫೆಕ್ಟ್ ರಾಜ್ಯದಲ್ಲಿ ಈ ಜಿಲ್ಲೆಗಳಲ್ಲಿ ಮಳೆ.!
- ಕೊಡಗು ಸೈನಿಕ ಶಾಲೆ ಪ್ರವೇಶಕ್ಕೆ ಅರ್ಜಿ ಆಹ್ವಾನ
- ವಿದ್ಯಾರ್ಥಿಗಳಿಗೆ ವಿವಿಧ ಸೌಲಭ್ಯ: ಅರ್ಜಿ ಆಹ್ವಾನ
- 2250 ರಂತೆ ನೇರವಾಗಿ ರೈತರಿಂದ ಮೆಕ್ಕೆಜೋಳ ಖರೀದಿ.!