ಇಂಫಾಲ್: ಮಣಿಪುರ ರಾಜ್ಯದಲ್ಲಿನ ಜನಾಂಗೀಯ ಸಂಘರ್ಷದಿಂದಾಗಿ 50,698 ಜನರು ತಮ್ಮ ಮನೆ ತೊರೆದಿದ್ದು, ಅವರಿಗೆ 349 ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ ಎಂದು ಮಣಿಪುರ ಸರ್ಕಾರ ತಿಳಿಸಿದೆ.
ಈ ಕುರಿತು ಮಾಹಿತಿ ಹಂಚಿಕೊಂಡ ಸಚಿವ ಡಾ. ಆರ್.ಕೆ. ರಂಜನ್ ಅವರು ರಾಜ್ಯದಲ್ಲಿ ಈಗಾಗಲೇ ಕೂಂಬಿಂಗ್ ಶುರು ಮಾಡಿದ್ದು, ಒಟ್ಟು 53 ಆಯುಧಗಳು, 39 ಬಾಂಬ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡದಂತೆ ಆದೇಶ ಮಾಡಲಾಗಿದೆ. ರಾಜ್ಯದಲ್ಲಿರುವ ಒಟ್ಟು 242 ಬ್ಯಾಂಕ್ ಶಾಖೆಗಳಲ್ಲಿ ಈಗಾಗಲೇ 198 ಶಾಖೆಗಳು ಮರಳಿ ಕಾರ್ಯ ನಿರ್ವಹಿಸುತ್ತಿವೆ ಎಂದರು. ಬೆಲೆ ಏರಿಕೆ ಮಾಡದಂತೆ ಆದೇಶ ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಯಲು ರಾಜ್ಯದಲ್ಲಿ ಬೆಲೆ ನಿಯಂತ್ರಣ ವ್ಯವಸ್ಥೆ ಜಾರಿ ಮಾಡಲಾಗಿದೆ.
ಇದರ ಮೂಲಕ ರಾಷ್ಟ್ರೀಯ ಹೆದ್ದಾರಿ-37 ಮೂಲಕ ರಾಜ್ಯಕ್ಕೆ ಅಗತ್ಯ ವಸ್ತುಗಳನ್ನು ತರಲಾಗುತ್ತಿದೆ. 5,000 ಮೆಟ್ರಿಕ್ ಟನ್ ನಿರ್ಮಾಣ ಸಾಮಗ್ರಿಗಳು, ಇಂಧನ ಮತ್ತು ಅಗತ್ಯ ವಸ್ತುಗಳನ್ನು 2,376 ಟ್ರಕ್‌ಗಳಲ್ಲಿ ಮಣಿಪುರಕ್ಕೆ ತರಲಾಗಿದೆ. ಅಧಿಕೃತ ವರದಿಯನ್ನು ಉಲ್ಲೇಖಿಸಿದ ಸಚಿವರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರಿಗಾಗಿ ತೆರೆಯಲಾದ ಪರಿಹಾರ ಶಿಬಿರಗಳ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಜಿಲ್ಲೆಗಳು ಮತ್ತು ಕ್ಲಸ್ಟರ್ ನೋಡಲ್ ಅಧಿಕಾರಿಗಳಿಗೆ ವಹಿಸಲಾಗಿದೆ ಎಂದು ಹೇಳಿದರು. ರಾಜ್ಯದಲ್ಲಿನ 242 ಬ್ಯಾಂಕ್ ಶಾಖೆಗಳಲ್ಲಿ 198 ಪುನರ್ ಕಾರ್ಯಾರಂಭ ಮಾಡಿವೆ. ಇನ್ನುಳಿದ ಬ್ಯಾಂಕುಗಳು ಸಹ ಶೀಘ್ರದಲ್ಲೇ ಕಾರ್ಯಾರಂಭ ಮಾಡುತ್ತೇವೆ ಎಂದು ತಿಳಿಸಿದರು.