Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಜೈಪುರ: ಹಳಿತಪ್ಪಿದ ಗೂಡ್ಸ್ ರೈಲು- ಏಳು ರೈಲುಗಳ ಸಂಚಾರ ರದ್ದು

0

ಜೈಪುರ: ಜೈಪುರ ಬಳಿ ಗೂಡ್ಸ್ ರೈಲಿನ ಎರಡು ವ್ಯಾಗನ್‌ಗಳು ಶನಿವಾರ ಹಳಿತಪ್ಪಿದ್ದು, ಇದರ ಪರಿಣಾಮ ಕನಿಷ್ಠ ಏಳು ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜೈಪುರ-ಮದರ್ ರೈಲ್ವೆ ವಿಭಾಗದ ಅಸಲ್ಪುರ್ ಜಾಬ್ನರ್ ಮತ್ತು ಹಿರ್ನೋಡಾ ನಿಲ್ದಾಣಗಳ ನಡುವೆ ಈ ಘಟನೆ ಸಂಭವಿಸಿದೆ ಈ ಪ್ರದೇಶವು ವಾಯುವ್ಯ ರೈಲ್ವೇಯ ಜೈಪುರ ವಿಭಾಗದ ವ್ಯಾಪ್ತಿಗೆ ಒಳಪಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾರ್ಕಳ: ಕಚೇರಿಯಲ್ಲೇ ಮಹಿಳಾ ಸಿಬ್ಬಂದಿ ಆತ್ಮಹತ್ಯೆಗೆ ಶರಣು

ಘಟನಾ ಸ್ಥಳದಲ್ಲಿ ಅಧಿಕಾರಿಗಳು ಧಾವಿಸಿದ್ದು ಹಳಿಗಳನ್ನು ಪುನಃಸ್ಥಾಪಿಸುವ ಕೆಲಸ ನಡೆಯುತ್ತಿದ್ದು ಆದಷ್ಟು ಬೇಗ ರೈಲು ಸಂಚಾರ ಆರಂಭಗೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

ಈ ಅವಘಡದಿಂದಾಗಿ 19735 ಜೈಪುರ-ಮಾರ್ವಾರ್ ಜಂಕ್ಷನ್ ಎಕ್ಸ್‌ಪ್ರೆಸ್, 19736 ಮಾರ್ವಾರ್ ಜಂಕ್ಷನ್-ಜೈಪುರ ಎಕ್ಸ್‌ಪ್ರೆಸ್ ರೈಲು,್ 22977 ಜೈಪುರ-ಜೋಧಪುರ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 22978 ಜೋಧ್‌ಪುರ-ಜೈಪುರ ಇಂಟರ್‌ಸಿಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್, 09605 ಅಜ್ಮೀರ್-ಜೈಪುರ DEMU ವಿಶೇಷ ರೈಲು ಹಾಗೂ 09606 ಜೈಪುರ-ಅಜ್ಮೀರ್ DEMU ವಿಶೇಷ ರೈಲಿನ ಸಂಚಾರ ರದ್ದುಗೊಂಡಿದೆ.

Leave A Reply

Your email address will not be published.