ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಜೊತೆ 8 ಮಂದಿ ಮಾತ್ರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕೇವಲ ಇಬ್ಬರ ಪದಗ್ರಹಣ ಬೇಡ ಅಂತ ಹೈಕಮಾಂಡ್ ಹೇಳಿದ್ದು, ಡಿಕೆ ಜೊತೆ ಇನ್ನು 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. 8 ಸಚಿವರು ಇವರು.. ಎಂಟು ಸಚಿವರು ಯಾರು? * ಎಂ. ಬಿ. ಪಾಟೀಲ್ (ಲಿಂಗಾಯತ) * ಡಾ. ಜಿ. ಪರಮೇಶ್ವರ್ (ದಲಿತ ಬಲ) * ಪ್ರಿಯಾಂಕ ಖರ್ಗೆ (ದಲಿತ ಬಲ) * ಕೆ.ಎಚ್. ಮುನಿಯಪ್ಪ (ದಲಿತ ಎಡ) * ಕೆ. ಜೆ. ಜಾರ್ಜ್ (ಕ್ರಿಶ್ಚಿಯನ್) * ಸತೀಶ್ ಜಾರಕಿಹೊಳಿ (ಪರಿಶಿಷ್ಠ ಪಂಗಡ) (ವಾಲ್ಮಿಕಿ) * ಜಮೀರ್ ಅಹ್ಮದ್ ಖಾನ್ (ಮುಸ್ಲಿಂ) * ರಾಮಲಿಂಗಾ ರೆಡ್ಡಿ (ರೆಡ್ಡಿ ಸಮುದಾಯ) ನಿನ್ನೆ ಮಧ್ಯಾಹ್ನದಿಂದ ಸಚಿವರ ಆಯ್ಕೆಗೆ ಭಾರೀ ಕಸರತ್ತು ನಡೆಯಿತು. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ನಿವಾಸದಲ್ಲಿ ತಡರಾತ್ರಿ ಎರಡು ಗಂಟೆಯವರೆಗೆ ಹೈವೋಲ್ಟೇಜ್ ಸಭೆ ನಡೆಯಿತು. ಜಾತಿವಾರು, ಹಿರಿತನದ ಆಧಾರ ಮೇಲೆ ಸಚಿವರನ್ನು ಆಯ್ಕೆ ಮಾಡಲಾಗಿದೆ. ಒಂದೇ ಬಾರಿಗೆ 28 ಸಚಿವರ ಆಯ್ಕೆಗೆ ಪ್ರಯತ್ನ ನಡೆಯಿತಾದರೂ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಒಮ್ಮತ ಮೂಡಲಿಲ್ಲ. ಇದರಿಂದ ಕೈ ಹೈಕಮಾಂಡ್ ಹೈರಾಣಾಯಿತು. ಅಂತಿಮವಾಗಿ ಎಂಟು ಸಚಿವರಿಗೆ ಮಾತ್ರ ಉಭಯ ನಾಯಕರು ಒಪ್ಪಿಗೆ ನೀಡಿದರು. ಇಂದು ಕೇವಲ ಎಂಟು ಸಚಿವರು ಮಾತ್ರ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.
[vc_row][vc_column]
BREAKING NEWS
- ‘ಕಟೀಲ್, ಬೊಮ್ಮಾಯಿ ಅವರೇ ನಿಮ್ಮ ಮನೆಗೂ ಕರೆಂಟ್ ಫ್ರೀ’ ಎಂದ ಕಾಂಗ್ರೆಸ್!
- 2022-23ನೇ ಸಾಲಿನಲ್ಲಿ ಪದವಿ ಪಡೆದ ನಿರುದ್ಯೋಗಿ ಯುವಕ- ಯುವತಿಯರಿಗೆ ‘ಯುವನಿಧಿ’ ಭಾಗ್ಯ ಜಾರಿ ಮಾಡಿದ ಸಿದ್ದು ಸರ್ಕಾರ
- ಮಂಗಳೂರು: ನಗರಾಭಿವೃದ್ದಿ ಪ್ರಾಧಿಕಾರದ ಸಿಬ್ಬಂದಿ ಆತ್ಮಹತ್ಯೆ
- ಗೃಹಲಕ್ಷ್ಮಿ ಯೋಜನೆ: ಅರ್ಜಿ ಸಲ್ಲಿಸುವುದು ಹೇಗೆ? ಬೇಕಾದ ದಾಖಲೆಗಳೇನು? ಕೊನೆ ದಿನಾಂಕದ ಮಾಹಿತಿ
- ಉಚಿತ ಬಸ್ ಯೋಜನೆ – ಜೂನ್ 11 ರಿಂದ ಉಚಿತ ಬಸ್ ಪ್ರಯಾಣ
- ಗ್ಯಾರೆಂಟ್ ಜಾರಿ: ಜು.1ರಿಂದ 200 ಯುನಿಟ್ ಉಚಿತ ವಿದ್ಯುತ್, ಎಪಿಎಲ್ ಗೂ ಗೃಹಲಕ್ಷ್ಮಿ
- ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟ ಪ್ರಕರಣ: ಅಪರಾಧಿ ಆದಿತ್ಯ ರಾವ್ ನಿಂದ ಜೈಲಿನಲ್ಲಿ ದಾಂಧಲೆ..!
- ಈ ಆರ್ಥಿಕ ವರ್ಷದಲ್ಲಿ ಎಲ್ಲಾ ಐದೂ ಗ್ಯಾರಂಟಿ ಜಾರಿ: ಷರತ್ತು ಅನ್ವಯ- ಸಿಎಂ
- ಕಡಬ: ಮನೆ ಮೇಲ್ಛಾವಣಿಯಿಂದ ಬಿದ್ದು ಕಾರ್ಮಿಕ ಮೃತ್ಯು
- ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ: ಸಿಬಿಐ ತನಿಖೆ ತಡೆಯಾಜ್ಞೆ ವಿಸ್ತರಣೆ