Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

ಜ್ಯೋತಿಷಿಯ ಪುತ್ರನನ್ನು ಸಿನಿಮೀಯ ರೀತಿಯಲ್ಲಿಕಿಡ್ನಾಪ್ ಮಾಡಿದ ಯುವಕ ; ಆರೋಪಿ ಬಂಧನ

0

ಜ್ಯೋತಿಷಿಯ 18 ವರ್ಷದ ಪುತ್ರನನ್ನು ಕಿಡ್ನಾಪ್​ ಮಾಡಿದ ಘಟನೆ ಆಗಸ್ಟ್​ 4ರಂದು ಬೆಂಗಳೂರಿನಲ್ಲಿ ನಡೆದಿದ್ದು  ತಡವಾಗಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿ ಅರ್ಜುನ್ ನನ್ನು ಬಂಧಿಸಿದ್ದಾರೆ. ಬಂಧಿತ ಯುವಕ ಅರ್ಜುನ್​​ ಮೂಲತಃ ತುಮಾಕೂರಿನವನು.  ಬೆಂಗಳೂರಿನಲ್ಲಿ ಪಿಜಿಯಲ್ಲಿ ವಾಸಿಸುತ್ತಿದ್ದು,  ಗ್ಯಾರೇಜ್​ನಲ್ಲಿ ಕೆಲಸ ಮಾಡುತ್ತಿದ್ದ. ಈ ನಡುವೆ ಸಿನಿಮಾ ನೋಡುತಿದ್ದ ಅರ್ಜುನ್​ನಿಂದ ಜ್ಯೋತಿಷಿ ಪುತ್ರನನ್ನು ಕಿಡ್ನಾಪ್​ ಮಾಡುವ ಖತರ್ನಾಕ ಯೋಚನೆ ಬಂದಿದೆ.ಜ್ಯೋತಿಷಿ ಮಗ ಮೆಡಿಕಲ್ ಸೀಟ್​ಗಾಗಿ ಕೋಚಿಂಗ್​ಗೆ ತೆರಳುತ್ತಿದ್ದ. ತಮ್ಮದೇ ಕಾರ್​ನಲ್ಲಿ ಕೋಚಿಂಗ್ ತೆರಳುತ್ತಿದ್ದು, ಡ್ರಾಪ್ ಕೇಳುವ ನೆಪದಲ್ಲಿ, ಗನ್ ಹಣೆಗಿಟ್ಟು ಗಾಡಿ ಹೇಳಿದ ಕಡೆ ಹೊಗುವಂತೆ ಸೂಚಿಸಿ ಕಿಡ್ನಾಪ್​ ಮಾಡಿ ಬಳಿಕ ಜ್ಯೋತಿಷಿ ಹಾಗೂ ಅವರ ಪತ್ನಿಗೆ ವಾಟ್ಸ್​​ ಆ್ಯಪ್ ವಿಡಿಯೋ ಕಾಲ್​ ಮಾಡಿ,​ 5 ಲಕ್ಷ ರೂ. ಡಿಮ್ಯಾಂಡ್​ ಮಾಡಿದ್ದಾನೆ.ಬಳಿಕ ಚಿನ್ನ ನೀಡುವುದಾಗಿ ಹೇಳಿ ಜ್ಯೋತಿಷಿ ಪತ್ನಿ ಮನೆಯಿಂದ ಹೊರಟಿದ್ದಾರೆ. ಮತ್ತೊಂದೆಡೆ ಮಗ ಕಿಡ್ನಾಪ್ ಆದ ಬಗ್ಗೆ ಜ್ಯೋತಿಷಿ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಕಿಡ್ನಾಪ್​ ಪ್ರಕರಣವನ್ನು ಹೆಚ್​ಎಸ್​ ಆರ್​ ಲೇಔಟ್ ಪೊಲೀಸರು ಭೇದಿಸಿದ್ದು, ಅರ್ಜುನ್ (19) ಎಂಬಾತನನ್ನು ಬಂಧಿಸಿದ್ದಾರೆ.

Leave A Reply

Your email address will not be published.