ಚಿತ್ರದುರ್ಗ: ಧಾರ್ಮಿಕ ಹಾಗೂ ರಾಜಕೀಯ ಸಂಬAಧಿ ಜಾಹೀರಾತುಗಳನ್ನು ಟಿ.ವಿ. ಹಾಗೂ ಕೇಬಲ್ ಟೆಲಿವಿಷನ್‌ಗಳಲ್ಲಿ ಪ್ರಸಾರ ಮಾಡುವ ಮುನ್ನ ಜಾಹೀರಾತು ಪ್ರಮಾಣೀಕರಣ ಪಡೆಯುವುದು ಕಡ್ಡಾಯವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು .ಜೆ.ಆರ್.ಜೆ. ಆದೇಶ ಹೊರಡಿಸಿದ್ದಾರೆ.
ಆದೇಶದ ಅನ್ವಯ ವಿಧಾನ ಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಕೇಬಲ್ ನೆಟ್ ಅಥವಾ ಟಿವಿಯಲ್ಲಿ ನೀಡುವ ವೈಯಕ್ತಿಕ ಜಾಹೀರಾತು ಪ್ರಮಾಣೀಕರಣಕ್ಕೆ ಚುನಾವಣಾ ಆಯೋಗ ನಿಗಧಿ ಪಡಿಸಿರುವ ಅನುಬಂಧ-ಎ ರಲ್ಲಿ ನಿಯೋಜಿತ ಅಧಿಕಾರಿಗೆ ನೀಡಬೇಕು. ಈ ಸಂದರ್ಭದಲ್ಲಿ ಎರೆಡು ಪ್ರತಿಗಳಲ್ಲಿ ಜಾಹೀರಾತಿನ ಎಲೆಕ್ಟಾçನಿಕ್ ನಮೂನೆಯ ಹಾಗೂ ಜಾಹೀರಾತಿನ ಸಂದೇಶದ ಮುದ್ರಿತ ಲೇಖನ ಸಲ್ಲಿಸಬೇಕು. ಜಾಹೀರಾತು ಉತ್ಪಾದನೆ ವೆಚ್ಚ, ಪ್ರಸರಣಾ ವೆಚ್ಚ, ಚುನಾವಣೆ ಲಾಭಕ್ಕಾಗಿ ಜಾಹೀರಾತು ನೀಡಲಾಗುತ್ತಿದೆ ಎನ್ನುವುದರ ಕುರಿತು ಪ್ರಮಾಣೀಕೃತ ಹೇಳಿಕೆ. ಸದರಿ ಜಾಹೀರಾತು ಸಂಬAಧ ಬಿಲ್ ಪಾವತಿಯನ್ನು ಚಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ಗಳ ನೀಡುವ ಕುರಿತು ಹೇಳಿಕೆ ಸಲ್ಲಿಸಬೇಕು.
ಹೀಗೆ ಸಲ್ಲಿಸಿದ ಜಾಹೀರಾತು ವಿವರವನ್ನು ಪರಿಶೀಲಿಸಿ ಅಧಿಕಾರಿಗಳು ತಿದ್ದುಪಡಿಗೆ ಸೂಚಿಸಿದರೆ 24 ಗಂಟೆ ಒಳಗಾಗಿ ತಿದ್ದುಪಡಿ ವಿವರನ್ನು ಮರಳಿ ನೀಡಬೇಕು. ನಂತರ ಜಾಹೀರಾತು ಸರ್ವೋಚ್ಛ ನ್ಯಾಯಾಲಯದ ನಿಯಮಾವಳಿಗೆ ಅನುಸಾರವಾಗಿದ್ದರೆ ಅಧಿಕಾರಿಗಳು ಅನುಬಂಧ-ಬಿ ಯಲ್ಲಿ ಪ್ರಸರಣಕ್ಕೆ ಪ್ರಮಾಣ ಪತ್ರ ನೀಡುವರು. ಪ್ರಮಾಣ ಪತ್ರ ಹೊಂದಿರದ ಜಾಹೀರಾತನ್ನು ಯಾವುದೇ ಟಿ.ವಿ. ಹಾಗೂ ಕೇಬಲ್ ಟೆಲಿವಿಷನ್‌ಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.