ಬೆಂಗಳೂರು: ಡಾ.ರಾಜಕುಮಾರ್ ಕುಟುಂಬದಲ್ಲಿ ಒಬ್ಬರ ಹಿಂದೊಬ್ಬರಂತೆ ಸಾವು ಸಂಭವಿಸಿರುವುದರಿಂದ ಈ ಕುರಿತು ಅಷ್ಟಮಂಗಲ ಪ್ರಶ್ನೆ ಕೇಳಲಿರುವ ಮಾಹಿತಿಯೊಂದು ಹೊರಬಿದ್ದಿದೆ. ಈಡಿಗ ಸಮುದಾಯ ಶ್ರೀಪ್ರಣವಾನಂದ ಸ್ವಾಮೀಜಿ ಈ ಕುರಿತು ವಿಷಯ ತಿಳಿಸಿದ್ದಾರೆ.
ಸ್ಪಂದನಾ ಅಂತಿಮಸಂಸ್ಕಾರದ ವಿಧಿ-ವಿಧಾನ ಕುರಿತು ವಿವರಣೆ ನೀಡುತ್ತಿದ್ದ ವೇಳೆ ಅವರು ಈ ವಿಷಯ ತಿಳಿಸಿದರು.
ಡಾ.ರಾಜ್ ಕುಟುಂಬದಲ್ಲಿ ಪುನೀತ್ ರಾಜಕುಮಾರ್ ಮತ್ತು ಸ್ಪಂದನಾ ಇಬ್ಬರೂ ಸಣ್ಣವಯಸ್ಸಿನಲ್ಲೇ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಕುರಿತು ನಾವು ಶಿವರಾಜ್ ಕುಮಾರ್ ಅವರ ಜೊತೆಗೆ ಈಗಾಗಲೇ ಮಾತಾಡಿದ್ದೇವೆ ಎಂದು ಪ್ರಣವಾನಂದಶ್ರೀ ತಿಳಿಸಿದರು.ಡಾ.ರಾಜ್ ಕುಟುಂಬದಲ್ಲಿ ಯಾಕೆ ಈ ರೀತಿ ಅಕಾಲ ಮೃತ್ಯು ಸಂಭವಿಸುತ್ತಿದೆ ಎಂದು ತಿಳಿದುಕೊಳ್ಳಲು ಮುಂದಾಗುತ್ತೇವೆ, ಅದರ ಮುಂದಾಳತ್ವ ನಾನು ವಹಿಸುತ್ತೇನೆ. ಇದಕ್ಕಾಗಿ ಈಡಿಗ ಸಮುದಾಯದ ಕೇರಳದ ತಂತ್ರಿಗಳ ಕಡೆಯಿಂದ ಅಷ್ಟಮಂಗಲ ಪ್ರಶ್ನೆ ಹಾಕಿ ಕೇಳಬೇಕು. 41 ದಿನಗಳ ನಂತರ ಕೇರಳದ ಉನ್ನತ ತಂತ್ರಿಗಳ ಬಳಿ ಹೋಗಿ ಅಷ್ಟಮಂಗಲ ಪ್ರಶ್ನೆ ಕೇಳುವ ಮೂಲಕ ಕಾರಣ ತಿಳಿದುಕೊಳ್ಳಲು ಪ್ರಯತ್ನಿಸುವುದಾಗಿ ಅವರು ಹೇಳಿದರು.
[vc_row][vc_column]
BREAKING NEWS
- ಮುರುಘಾ ಶರಣರ ಕೈಗೆ ಬಂತು ಮಠದ ಅಧಿಕಾರ.!
- ಮದುವೆಯಲ್ಲಿ ಕೈತಪ್ಪಿ ಅತಿಥಿಗಳ ಮೇಲೆ ಬಿದ್ದ ಮುಸುರೆ ತಟ್ಟೆಗಳು – ವೇಟರ್ನನ್ನು ಕೊಂದು, ಪೊದೆಗೆ ಎಸೆದ ಪಾಪಿಗಳು ಅರೆಸ್ಟ್
- ಬಿಜೆಪಿ ಮುಖಂಡ ಮಣಿಕಂಠ ರಾಥೋಡ್ ಸುದ್ದಿಗೋಷ್ಠಿಗೂ ಮುನ್ನ ಪೊಲೀಸ್ ವಶಕ್ಕೆ
- ಯುನೆಸ್ಕೋದ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದ ಗಾರ್ಬಾ ನೃತ್ಯ
- ‘ಗೊಡ್ಡು ಬೆದರಿಕೆಗಳಿಗೆ ಹೆದರುವ ಪಕ್ಷ ಬಿಜೆಪಿ ಅಲ್ಲ’- ಬಿ.ವೈ.ವಿಜಯೇಂದ್ರ
- ಲಾರಿ – ಟಾಟಾ ಏಸ್ ನಡುವೆ ಭೀಕರ ಅಪಘಾತ-ನಾಲ್ವರು ಸಾವು
- ಜೈನಮುನಿ ಹತ್ಯೆ ಪ್ರಕರಣ-500ಕ್ಕೂ ಹೆಚ್ಚು ಪುಟಗಳ ಚಾರ್ಜ್ಶೀಟ್ ನ್ಯಾಯಾಲಯಕ್ಕೆ ಸಲ್ಲಿಕೆ
- ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ ಅದಕ್ಕೆ ಅವಮಾನ ಮಾಡಬೇಡಿ –ರಿಷಬ್ ಶೆಟ್ಟಿ
- ವರದಕ್ಷಿಣೆ ದಾಹಕ್ಕೆ ಬಲಿಯಾದರೆ ಯುವ ವ್ಯದ್ಯೆ ?
- ನಿಮ್ಮ ಪ್ಯಾನ್ ಕಾರ್ಡ್ ಕಳೆದು ಹೋಗಿದ್ಯಾ..? ಡೂಪ್ಲಿಕೇಟ್ ಕಾರ್ಡ್ ಪಡೆಯಲು ಹೀಗೆ ಮಾಡಿ