Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

BREAKING NEWS

[/vc_column][/vc_row]

ಡ್ರಗ್ಸ್​​ ಸಾಗಿಸುತ್ತಿದ್ದ ಪಾಕ್ ಡ್ರೋನ್ ಹೊಡೆದುರುಳಿಸಿದ ಬಿಎಸ್​ಎಫ್​

0

ಪಂಜಾಬ್: ಡ್ರಗ್ಸ್​ ಸಾಗಿಸುತ್ತಿದ್ದ ಪಾಕಿಸ್ತಾನಿ ಡ್ರೋನ್​ ಅನ್ನು ಗಡಿ ಭದ್ರತಾ ಪಡೆ ಹೊಡೆದುರುಳಿಸಿರುವ ಘಟನೆ ಅಮೃತಸರದಲ್ಲಿ ನಡೆದಿದ್ದು, 4 ದಿನದಲ್ಲಿ ನಡೆದ ಐದನೇ ಘಟನೆ ಇದಾಗಿದೆ.

ಹೆರಾಯಿನ್ ಎಂದು ಶಂಕಿಸಲಾದ ಎರಡು ಪ್ಯಾಕೆಟ್‌ಗಳನ್ನು ತಪಾಸಣೆಯ ಸಮಯದಲ್ಲಿ ವಶಪಡಿಸಿಕೊಳ್ಳಲಾಗಿದೆ.

ಅತಿಥಿ ಉಪನ್ಯಾಸಕರಿಗೆ ಉದ್ಯೋಗ ಭದ್ರತೆ ನೀಡಿ: ಹನುಮಂತಗೌಡ

 

ಇನ್ನು ಬಿಒಪಿ ರಾಜತಾಲ್ ಪ್ರದೇಶದಲ್ಲಿ ಬಿಎಸ್‌ಎಫ್‌ನ 144 ಕಾರ್ಪ್ಸ್‌ನ ಪಡೆಗಳು ಕಾರ್ಯಾಚರಣೆ ನಡೆಸಿ ಡ್ರೋನ್ ಅನ್ನು ಹೊಡೆದುರುಳಿಸಲಾಗಿದ್ದು, ನಿಷೇಧಿತ ಪ್ರದೇಶದಲ್ಲಿ ಡ್ರೋನ್ ಹಾರಿ ಬರುತ್ತಿತ್ತು, ಇದರಲ್ಲಿ ಬಿಳಿಯ ಪ್ಯಾಕೆಟ್​ಗಳು ಇರುವುದನ್ನು ಗಮನಿಸಿ ದಾಳಿ ಮಾಡಲಾಗಿದೆ.

ಇದಕ್ಕೂ ಮೊದಲು ಭಾನುವಾರವೂ ಇದೇ ಭಾಗದಿಂದ ಬಂದ ಡ್ರೋನ್​ ಅನ್ನು ಹೊಡೆದುರುಳಿಸಲಾಗಿತ್ತು. ಕಳೆದ 4 ದಿನಗಳಲ್ಲಿ ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿದ 5 ಡ್ರೋನ್ ಇದಾಗಿದೆ.

Leave A Reply

Your email address will not be published.