ಮಂಗಳೂರು: ತುಳುನಾಡು ತನ್ನ ಪ್ರಾಚೀನ ಆಚರಣೆಗಳು ಮತ್ತು ಶ್ರೀಮಂತ ಪರಂಪರೆಗೆ ವಿಶ್ವಾದ್ಯಂತ ಹೆಸರುವಾಸಿಯಾಗಿದೆ. ಇನ್ನು ಆಟಿ ಅಮಾವಾಸ್ಯೆ ಎಂದರೆ ಕರಾವಳಿಗರಿಗೆ ಅತ್ಯಂತ ಮಹತ್ವದ ದಿನ.
ಪ್ರೀತಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದುಷ್ಕರ್ಮಿಗಳು
ಈ ದಿನ ಪಾಲೆ ಮರದ ಕಷಾಯ ಅಂದರೆ ಪಾಲೆದ ಕಷಾಯಕ್ಕೆ ವಿಶೇಷ ಬೇಡಿಕೆ ಇದೆ.ಮನೆಯಿಂದ ಹೊರಗೆ ಇಳಿಯಲೂ ಸಾಧ್ಯವಾಗದಂತೆ ಧಾರಾಕಾರ ಮಳೆ ಬರುವ ಆಟಿ ತಿಂಗಳಲ್ಲಿ ಬರುವ ಇದು ಆರೋಗ್ಯ ದೃಷ್ಟಿಯಿಂದ, ಸಾಮಾಜಿಕವಾಗಿ, ಧಾರ್ಮಿಕವಾಗಿ ಪ್ರಾಮುಖ್ಯತೆ ಪಡೆದಿದೆ. ರೋಗನಿರೋಧಕ ಗುಣ ಇರುವ ಪಾಲೆ (ಹಾಲೆ) ಮರದ ತೊಗಟೆಯ ಈ ರಸವನ್ನು ಆಟಿ ಅಮಾವಾಸ್ಯೆ ದಿನದಂದು ಮದ್ದಿನ ರೀತಿಯಲ್ಲಿ ಕುಡಿಯುವ ಪದ್ಧತಿ ಕರಾವಳಿಯಲ್ಲಿದೆ. ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಬರೀ ಹೊಟ್ಟೆಯಲ್ಲಿ ಹಾಲೆ ಮರದ (ಕೆತ್ತೆ) ಕಷಾಯ ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಚುವುದು ಎಂಬ ನಂಬಿಕೆ ಇದೆ. ಸೂರ್ಯೋದಯಕ್ಕೆ ಮುಂಚೆ ಎದ್ದು ಕಲ್ಲಿನಿಂದ ಪಾಲೆ ಮರದ ಕೆತ್ತೆಯನ್ನು ಕೆತ್ತಿ ತಂದು ಕಷಾಯ ಮಾಡಿ ಕುಡಿಯುವುದು ಕರಾವಳಿಯಲ್ಲಿ ಅನಾದಿ ಕಾಲದಿಂದಲೂ ನಡೆದು ಬಂದ ಆಚರಣೆ.
ಅಧಿಕ ಮಾಸದ ಪರಿಣಾಮ ಎರಡು ಬಾರಿ ಆಟಿ ಅಮಾವಾಸ್ಯೆ ಬಂದಿದ್ದರೂ ಇಂದೇ ಅಂದರೆ ಆ. 17ರಂದೇ ಅಟಿ ಅಮಾವಾಸ್ಯೆ ಆಚರಿಸಲಾಗುತ್ತಿದೆ.