ಬೆಂಗಳೂರು: ಲಿಂಗಾಯತರು ಹಾಗೂ ದಲಿತರನ್ನೂ ಒಳಗೊಂಡಂತೆ ಸಮುದಾಯಗಳ ಆಧಾರದ ಮೇಲೆ ಅಧಿಕಾರ ಹಂಚಿಕೆ ಆಗಬೇಕಿತ್ತೆಂದು ಶಾಸಕ ಎಂ.ಬಿ.ಪಾಟೀಲ್ ಡಿಸಿಎಂ ಸ್ಥಾನ ಸಿಗದಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿ, ಸಚಿವ ಸ್ಥಾನಗಳ ಹಂಚಿಕೆಯಲ್ಲಾದರೂ ಎಲ್ಲಾ ಸಮುದಾಯಗಳಿಗೆ ವರಿಷ್ಠರು ಸೂಕ್ತ ನ್ಯಾಯ ಒದಗಿಸುವ ನಿರೀಕ್ಷೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜಗದೀಶ್ ಶೆಟ್ಟರ್ ಪಕ್ಷ ಸೇರ್ಪಡೆ ಆಗಿದ್ದರಿಂದ ಎಂಬಿಪಿ ಸೇರಿ 36 ಮಂದಿ ಲಿಂಗಾಯತ ಶಾಸಕರು ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.