ಬೆಂಗಳೂರು- ತನ್ವೀರ್ ಸೇಠ್ ಪತ್ರದ ವಿಚಾರವಾಗಿ ಮಾಜಿ ಸಿಎಂ ಬೊಮ್ಮಾಯಿ ಖಂಡನೆ ವ್ಯಕ್ತಪಡಿಸಿದ್ದಾರೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಕೇಸ್ ಬಹಳ ಗಂಭೀರ ಆಗಿವೆ. ಪೊಲೀಸ್ ಠಾಣೆ ಸುಟ್ಡಿದ್ದಾರೆ, ಶಾಸಕನ ಮನೆ ಸುಟ್ಟಿದ್ದಾರೆ. ಇಂಥ ಕೇಸ್ ಗಳನ್ನು ವಾಪಸ್ ಪಡೆಯಲು ಹೋಗ್ತಿರೋದು ಸರಿಯಲ್ಲ, ಇವರೆಲ್ಲ ರಾಜ್ಯದ ವಿರುದ್ಧ ದಂಗೆ ಎದ್ದವರು ಎಂದು ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ. ಅಲ್ಲದೇ ಇಂಥ ದುಷ್ಟ ಶಕ್ತಿಗಳಿಗೆ ಸರ್ಕಾರ ಕುಮ್ಮಕ್ಕು ಕೊಡಬಾರದು, ಸರ್ಕಾರ ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯಬಾರದು, ಹೊರದೇಶಗಳ ಶಕ್ತಿಗಳ ಕುಮ್ಮಕ್ಕಿನಿಂದ ಇಂತಹ ಕೃತ್ಯಗಳು ನಡೀತಿವೆ. ಸಿಎಂಗೂ ಈ ಥರದ ಕೇಸ್ ಗಳ ವಾಪಸಾತಿಗೆ ಮನವಿ ಕೊಟ್ಟಿದ್ದಾರೆ ಅಂತ ಕೇಳಿಬಂದಿದೆ. ಸಿಎಂ ಇದರ ಬಗ್ಗೆ ಸ್ಪಷ್ಟನೆ ಕೊಡಬೇಕು. ವಿದ್ರೋಹಿ ಶಕ್ತಿಗಳ ಪರ ಸರ್ಕಾರ ನಿಲ್ಲಬಾರದು ಎಂದು ಬೊಮ್ಮಾಯಿ ಆಹ್ರಿಸಿದ್ದಾರೆ. ಉಡುಪಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ವಿಡಿಯೋ ಮಾಡಿರೋದು ಹೇಯ ಕೃತ್ಯ, ಖಂಡನೀಯ. ಒಬ್ಬ ವಿದ್ಯಾರ್ಥಿನಿ ಇದನ್ನು ಬಯಲಿಗೆಳೆದರೆ ಆಕೆ ವಿರುದ್ಧವೇ ಪೊಲೀಸರು ತನಿಖೆ ಮಾಡ್ತಾರೆ. ಪೊಲೀಸರು ಯಾರ ಒತ್ತಡಕ್ಕೆ ಕೆಲಸ ಮಾಡ್ತಿದಾರೆ .ಪೊಲೀಸರು ಏನೂ ಆಗಿಲ್ಲ ಅಂತಿದಾರೆ. ಹಾಗಾದ್ರೆ ಕಾಲೇಜಿನವ್ರು ಸುಮ್ ಸುಮ್ನೆ ಆ ಮೂವರು ವಿದ್ಯಾರ್ಥಿನಿಯರ ಸಸ್ಪೆಂಡ್ ಮಾಡಿದ್ದೇಕೆ? ಯಾಕೆ ಆ ವಿದ್ಯಾರ್ಥಿನಿಯರು ತಪ್ಪೊಪ್ಪಿಗೆ ಬರೆದುಕೊಡಬೇಕು..? ಅವರ ತಪ್ಪೊಪ್ಪಿಗೆ ಪತ್ರ ಒಂದೇ ಸಾಕು ಅವರ ವಿರುದ್ಧ ಕೇಸ್ ಹಾಕಲು ಅಂತಾ ಮಾಜಿ ಸಿಎಂ ಬೊಮ್ಮಾಯಿ ಕಿಡಿಕಾರಿದ್ದಾರೆ.
[vc_row][vc_column]
BREAKING NEWS
- ವೀರಶೈವ ಲಿಂಗಾಯತರು ಸ್ವಯಂ ಉದ್ಯೋಗ, ಶೈಕ್ಷಣಿಕ, ಕಾರು ಖರೀದಿ ಸಾಲಕ್ಕೆ ಅರ್ಜಿ ಆಹ್ವಾನ.!
- ಕರ್ನಾಟಕ ಡಿ.ಎಸ್.ಟಿ. ಪಿ.ಹೆಚ್.ಡಿ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
- ಉದ್ಯಮಶೀಲತಾ ಅಭಿವೃದ್ದಿ ತರಬೇತಿ ಕಾರ್ಯಕ್ರಮ.!
- ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿಗೆ ರಾಷ್ಟ್ರಮಟ್ಟದಲ್ಲಿ 2ನೇ ಬಹುಮಾನ- ಡಿ. ಸುಧಾಕರ್
- ಮಾರಕ ಕಾಯಿಲೆ ಡೆಂಗ್ಯೂ ಬಗ್ಗೆ ಈ ಲಕ್ಷಣಗಳು ಕಂಡುಬಂದರೆ.?
- ಈ ಕಾರಣಕ್ಕೆ ಈ ಪರ್ವತ ಚಾರಣಕ್ಕೆ ನಿಷೇಧ.. !
- ಇಂದು ಮತ್ತೊಮ್ಮೆ ಎಮರ್ಜೆನ್ಸಿ ಅಲರ್ಟ್.. ! ಏನದು.?
- ಪುಷ್ಪಗಳಿಂದ ಶತ್ರುನಾಶ ತಂತ್ರ ಈ ಒಂದೇ ಒಂದು ಪುಷ್ಪದಿಂದ ಎಂತಹ ಶತ್ರು ಇದ್ದರೂ ಕೂಡ ನಾಶ ಮಾಡಿ ನಿಮ್ಮಂತೆ ಶರಣಾಗತಿಯಾಗುವತರ ಮಾಡಬಹುದು!
- — –ದಾಸೋಹದ ಸಂಗಣ್ಣ ಅವರ ವಚನ .!
- ನೇಪಾಳದಲ್ಲಿ ಭೂಕಂಪನ: ದೆಹಲಿ, ಎನ್ ಸಿಆರ್ ನಲ್ಲೂ ಕಂಪಿಸಿದ ಭೂಮಿ