Bcsuddi Kannada News
www.bcsuddi.com is an Kannada web portal founded by Basavaraju C. The website provides news updates, karnataka, india, world, sports, entertainment, film news in Kannada

[vc_row][vc_column]

[/vc_column][/vc_row]

ದೇವಸ್ಥಾನಗಳಿಗೆ ಅನುದಾನ ನಿಲ್ಲಿಸುವ ಸುತ್ತೋಲೆ ಹಿಂಪಡೆದ ಸರ್ಕಾರ

0

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇವಸ್ಥಾನಗಳ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ ಅನುದಾನಕ್ಕೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದ ಬೆನ್ನಲ್ಲೇ ಸುತ್ತೋಲೆಯನ್ನು ವಾಪಾಸು ಹಿಂದಕ್ಕೆ ಪಡೆದಿದೆ.

2022-23ನೇ ಸಾಲಿನಲ್ಲಿ ಬಿಡುಗಡೆಯಾದ ಅನುದಾನ ಬಳಕೆ ಮಾಡದಂತೆ ಮುಜರಾಯಿ ಇಲಾಖೆ ಮಹತ್ವದ ಸುತ್ತೋಲೆ ಹೊರಡಿಸಿತ್ತು.ಇದಕ್ಕೆ ವಿರೋಧ ವ್ಯಕ್ತವಾದ ಹಿನ್ನಲೆ  ಸರಕಾರ ಆದೇಶವನ್ನು ಹಿಂದಕ್ಕೆ ಪಡೆದಿದೆ.

ಆದರೆ ಸಚಿವ ಗಮನಕ್ಕೆ ಬಾರದೆ ಈ ಆದೇಶ ಪ್ರಕಟಿಸಲಗಿತ್ತು. ಇದೀಗ ಆದೇಶವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಮುಜುರಾಯಿ ಇಲಾಖೆ ತಿಳಿಸಿದೆ.

ಆಗಸ್ಟ್ 14 ರಂದು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿರುವ ಮುಜರಾಯಿ ಇಲಾಖೆ ದೇವಾಲಯದ ಅಭಿವೃದ್ಧಿ ಮತ್ತು ಜೀರ್ಣೋದ್ಧಾರಕ್ಕೆ ಮಂಜೂರಾದ ಹಣದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ನಡೆಸದಂತೆ ಉಲ್ಲೇಖಿಸಿತ್ತು.

Leave A Reply

Your email address will not be published.